ಬದಿಯಡ್ಕ: ಕ್ಯಾಂಪ್ಕೋ ಸ್ವಾಂತನ ಚಿಕಿತ್ಸಾ ಧನಸಹಾಯ ಯೋಜನೆಯ ಮೂಲಕ ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ಕ್ಯಾಂಪ್ಕೋ ಸಕ್ರೀಯ ಸದಸ್ಯರಿಗೆ ನೀಡಲಾಗುವ ಚಿಕಿತ್ಸಾ ಧನಸಹಾಯದ ಅಂಗವಾಗಿ, ಮುಳಿಯಾರ್ ನಿವಾಸಿ ಅಬ್ದುಲ್ ಖಾದರ್ ಅವರಿಗೆ ರೂ 50,000 ಮೊತ್ತದ ಧನಸಹಾಯದ ಚೆಕ್ ಅನ್ನು ಕ್ಯಾಂಪ್ಕೋ ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ವಿತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ., ಮುಳಿಯಾರ್ ಶಾಖಾ ವ್ಯವಸ್ಥಾಪಕ ಅನಂತೇಶ್ವರ ನಾಯಕ್ ಹಾಗೂ ಸಿಬ್ಬಂದಿ ವಾಣಿ ಸರಸ್ವತಿ ಉಪಸ್ಥಿತರಿದ್ದರು.

.jpg)
