HEALTH TIPS

ರೈಲ್ವೇ ಟಿಕೆಟ್ ಗಳಿಗೆ ವಿಮೆ ಒದಗಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ:  ಅಕ್ಟೋಬರ್ 27ರಿಂದ ರೈಲು ನಿಲ್ದಾಣಗಳಲ್ಲಿ ಖರೀದಿಸುವ ಟಿಕೆಟ್ ಗಳಿಗೆ ವಿಮೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೇಸ್‌ ಗೆ ನಿರ್ದೇಶನ ನೀಡಿದೆ. ಈ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ರೈಲ್ವೇ ಮಂಡಳಿಯು ವಿಫಲವಾದರೆ ಅದನ್ನೇ ನೇರವಾಗಿ ಹೊಣೆಯಾಗಿಸಲಾಗುವುದು ಎಂದು ಸರ್ವೋಚ್ಛ ನ್ಯಾಯಾಲಯ ಎಚ್ಚರಿಸಿದೆ.


2023ರ ಜೂನ್ ತಿಂಗಳಲ್ಲಿ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 6ರಂದು ಈ ನಿರ್ದೇಶನ ನೀಡಿದೆ. ಕವಚ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೊಳಿಸಲು ವಿಫಲವಾಗಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ವಾದಿಸಿರುವ ಅರ್ಜಿದಾರರು, ಅದರ ತನಿಖೆಗೆ ಆಯೋಗವೊಂದನ್ನು ರಚಿಸುವಂತೆ ಕೋರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ಅರ್ಜಿಯ ವ್ಯಾಪ್ತಿಯನ್ನು ವಿಸ್ತರಿಸಿತು. ಅರ್ಜಿಯ ವ್ಯಾಪ್ತಿಗೆ ರೈಲ್ವೇ ಪಾದಚಾರಿಗಳ ಮೇಲ್ಸೇತುವೆಗಳು, ಹಳಿಗಳಿಗೆ ತಡೆಬೇಲಿ ನಿರ್ಮಿಸುವುದು ಮತ್ತು ಕೌಂಟರ್ ನಲ್ಲಿ ಖರೀದಿಸಲಾದ ಟಿಕೆಟ್ ಗಳಿಗೆ ವಿಮೆ ಇಲ್ಲದಿರುವ ವಿಷಯಗಳನ್ನೂ ತಂದಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries