HEALTH TIPS

ಹೈದರಾಬಾದ್ ವಿಮಾನ ನಿಲ್ದಾಣದ 'ಎಕ್ಸ್' ಖಾತೆ ಹ್ಯಾಕ್

ಹೈದರಾಬಾದ್:  ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಆರ್‌ಜಿಐಎ) ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯನ್ನು ಇಂದು ಹ್ಯಾಕ್ ಮಾಡಲಾಗಿತ್ತು. ಬಳಿಕ ಐಟಿ ತಂಡ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಂಡು 'ಎಕ್ಸ್' ಖಾತೆಯನ್ನು ಮರಳಿ ಪಡೆದಿದೆ ಎಂದು ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮಾಹಿತಿ ನೀಡಿದೆ.


ಹ್ಯಾಕ್‌ಗೆ ಒಳಗಾಗಿದ್ದ ಆರ್‌ಜಿಐಎ ಹೈದರಾಬಾದ್‌ನ ಅಧಿಕೃತ 'ಎಕ್ಸ್' ಖಾತೆಯನ್ನು ಸರಿಪಡಿಸಲಾಗಿದೆ. ಈಗ ಆ ಖಾತೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಘಟನೆ ಕುರಿತು ಸೈಬರ್ ವಿಭಾಗದ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ ಎಂದು ಜಿಹೆಚ್‌ಐಎಎಲ್ ತಿಳಿಸಿದೆ.

ಈ 'ಎಕ್ಸ್' ಖಾತೆಯನ್ನು ವಿಮಾನ ನಿಲ್ದಾಣದ ವ್ಯವಸ್ಥೆಗಳೊಂದಿಗೆ ಸಂಯೋಜಿಸಿಲ್ಲ. ಆದ್ದರಿಂದ ವಿಮಾನ ನಿಲ್ದಾಣದ ವ್ಯವಸ್ಥೆ , ಪ್ರಯಾಣಿಕರ ಸೇವೆಗಳು, ಕಾರ್ಯಾಚರಣಾ ವ್ಯವಸ್ಥೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಜಿಐಎ ಸ್ಪಷ್ಟಪಡಿಸಿದೆ.

ಇಂದು ಬೆಳಗ್ಗೆ 1.30 ರ ಸುಮಾರಿಗೆ ಆರ್‌ಜಿಐಎ ಎಕ್ಸ್ ಖಾತೆ ಹ್ಯಾಕ್ ಆಗಿತ್ತು. ಆ ವೇಳೆ ಆರ್‌ಜಿಐಎ 'ಎಕ್ಸ್‌'ನಲ್ಲಿ ಕ್ರಿಪ್ಟೋಕರೆನ್ಸಿ ಸಂಬಂಧಿತ ಪ್ರಚಾರದ ಪೋಸ್ಟ್‌ಗಳು, ಚಿತ್ರಗಳನ್ನು ಒಳಗೊಂಡಿತ್ತು. ಆ ಕೂಡಲೇ ಐಟಿ ತಂಡ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ 'ಎಕ್ಸ್' ಖಾತೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ ಜಿಹೆಚ್‌ಐಎಎಲ್ ಮಾಹಿತಿ ಹಂಚಿಕೊಂಡಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries