ನವದೆಹಲಿ: ಸಂಸದ ಜಾನ್ ಬ್ರಿಟಾಸ್ ಅವರನ್ನು ಕೇಂದ್ರ ಪಡೆ, ಸಿಆರ್.ಪಿ.ಎಫ್ ಥಳಿಸಿದೆ ಎಂದು ಅವರು ಅವಲತ್ತುಕೊಂಡಿದ್ದಾರೆ. ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಸಿಆರ್.ಪಿ.ಎಫ್ ಸಿಬ್ಬಂದಿಗಳು ಅವರನ್ನು ಬಲವಂತವಾಗಿ ಪೋಲೀಸ್ ವಾಹನಕ್ಕೆ ಎಳೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ತಾನು ಸಂಸದ ಎಂದು ಹೇಳಿದ ನಂತರವಷ್ಟೇ ಪೋಲೀಸರು ತನ್ನನ್ನು ಹೋಗಲು ಬಿಟ್ಟರು ಎಂದು ಜಾನ್ ಬ್ರಿಟಾಸ್ ಹೇಳಿದ್ದಾರೆ. ತಾನು ಸಂಸದ ಎಂದು ತಿಳಿದಾಗ, ಅವರು ತನ್ನನ್ನು ವಾಹನದಿಂದ ಹೊರಗೆ ಬಿಟ್ಟರು. ಸಿಆರ್ಪಿಎಫ್ ಸಿಬ್ಬಂದಿ ತನ್ನನ್ನು ವಾಹನದಲ್ಲಿ ಹಿಡಿದು ಉಸಿರುಗಟ್ಟಿಸಿದರು ಮತ್ತು ಏನೇ ಮಾಡಿದರೂ ಈ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಜಾನ್ ಬ್ರಿಟಾಸ್ ಹೇಳುತ್ತಾರೆ.
ಡಿವೈಎಫ್ಐ ನಾಯಕ ಜೇಕ್ ಸಿ ಥಾಮಸ್ ಮತ್ತು ಎಸ್ಎಫ್ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ ಸಜಿ ಸೇರಿದಂತೆ ಇತರರು ಗಾಯಗೊಂಡಿದ್ದಾರೆ ಎಂಬ ದೂರುಗಳಿವೆ.



