HEALTH TIPS

ಸಿಇಸಿ ಮತ್ತು ಚುನಾವಣಾ ಆಯುಕ್ತರು ನ್ಯಾಯಾಧೀಶರಿಗಿಂತಲೂ ಹೆಚ್ಚಿನ ಕಾನೂನು ರಕ್ಷಣೆ ಹೊಂದಿದ್ದಾರೆ: ಸುಪ್ರೀಂ ಕೋರ್ಟ್

ನವದೆಹಲಿ:  2023ರ ಕಾಯ್ದೆಯಡಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರಿಗೆ (ಇಸಿ) ನೀಡಲಾಗಿರುವ ಕಾನೂನು ರಕ್ಷಣೆಯು ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಲಭ್ಯವಿರುವ ರಕ್ಷಣೆಗಿಂತಲೂ ಹೆಚ್ಚಿರಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹೇಳಿದೆ.


ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಸಿಇಸಿ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆನ್ನಲಾದ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕಾಸ್ ಸಿಂಗ್, 2023ರ 'ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ,ಸೇವಾ ನಿಯಮಗಳು ಮತ್ತು ಅಧಿಕಾರಾವಧಿ) ಕಾಯ್ದೆಯು ಅವರ ಅಧಿಕಾರ ಮತ್ತು ಕಾನೂನು ರಕ್ಷಣೆಯನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಪ್ರತಿಪಾದಿಸಿದರು.

2023ರ ಕಾಯ್ದೆಯ ಕಲಂ 16ರ ಪ್ರಕಾರ, ಸಿಇಸಿ ಮತ್ತು ಇಸಿಗಳು ತಮ್ಮ ಅಧಿಕೃತ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಮಾಡಿದ ಕೃತ್ಯಗಳಿಗೆ ಸಿವಿಲ್ ಅಥವಾ ಕ್ರಿಮಿನಲ್ ಕಾನೂನು ಕ್ರಮಗಳಿಂದ ರಕ್ಷಣೆ ಹೊಂದಿದ್ದಾರೆ. ಅವರು ಹುದ್ದೆಯಿಂದ ಕೆಳಗಿಳಿದ ಮೇಲೆಯೂ ಈ ಕಾನೂನು ರಕ್ಷಣೆ ಮುಂದುವರಿಯುತ್ತದೆ.

ಈ ಹಂತದಲ್ಲಿ ನ್ಯಾ.ಬಾಗ್ಚಿ ಅವರು, ಈ ರಕ್ಷಣೆಯು ಬಹುಶಃ ರಾಷ್ಟ್ರಪತಿಗಳಿಗೆ ಮಾತ್ರ ಇರುತ್ತದೆ. ಇದು ನ್ಯಾಯಾಧೀಶರಿಗೂ ಸಹ ಅನ್ವಯಿಸುವುದಿಲ್ಲ ಎಂಬ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನು ಒಪ್ಪಿಕೊಂಡ ಸಿಂಗ್, ಪ್ರಧಾನ ಮಂತ್ರಿಯವರಿಗೂ ಈ ರಕ್ಷಣೆ ಇಲ್ಲ. ಈ ಕಾಯ್ದೆಯು ಸಿಇಸಿಗೆ ವಿಶೇಷ ಕಾನೂನು ರಕ್ಷಣೆಯನ್ನು ನೀಡಿದೆ ಎಂದು ವಾದಿಸಿದರು.

ಶಾಸನವು ಸಿಇಸಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗಿಂತಲೂ ಉನ್ನತಪೀಠದಲ್ಲಿರಿಸಿದೆ, ಇಂದು ಚುನಾವಣಾ ಆಯೋಗವು (ಇಸಿಐ) ಇತರ ಯಾವುದೇ ಸಾಂವಿಧಾನಿಕ ಪ್ರಾಧಿಕಾರಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ ಎಂದು ಅವರು ಹೇಳಿದರು.

ಅಂತಿಮವಾಗಿ ನ್ಯಾಯಾಲಯವು ಕೇಂದ್ರ ಸರಕಾರ, ಇಸಿಐ, ಸಿಇಸಿ ಮತ್ತು ಇಸಿಗಳಿಗೆ ನೋಟಿಸ್ ಹೊರಡಿಸಿತು.

ಕಾನೂನು ರಕ್ಷಣೆಯ ಹೋಲಿಕೆ:

1985ರ ನ್ಯಾಯಾಧೀಶರ (ರಕ್ಷಣೆ) ಕಾಯ್ದೆಯ ಕಲಂ 3(1) ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರಿಗೆ ಇದೇ ರೀತಿಯ ರಕ್ಷಣೆ ನೀಡುತ್ತದೆ. ಆದರೆ, ಕಲಂ 3(2) ಸ್ಪಷ್ಟವಾಗಿ, ನ್ಯಾಯಾಧೀಶರ ವಿರುದ್ಧ ಕ್ರಮ (ಸಿವಿಲ್, ಕ್ರಿಮಿನಲ್ ಅಥವಾ ಇಲಾಖಾ ನಡಾವಳಿ) ಕೈಗೊಳ್ಳಲು ಕೇಂದ್ರ,ರಾಜ್ಯ ಸರಕಾರ,ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಇತರ ಯಾವುದೇ ಕಾನೂನುಬದ್ಧ ಪ್ರಾಧಿಕಾರಕ್ಕೆ ಇರುವ ಅಧಿಕಾರವನ್ನು ಕಾಯ್ದಿರಿಸುತ್ತದೆ.

ಆದರೆ 2023ರ ಸಿಇಸಿ ಕಾಯ್ದೆಯಲ್ಲಿ ಇಂತಹ ಯಾವುದೇ ನಿಬಂಧನೆ ಇಲ್ಲ. ಅಂದರೆ, ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಇವುಗಳ ಅಧಿಕಾರವನ್ನು ಈ ಕಾಯ್ದೆಯು ಕಾದಿರಿಸಿಲ್ಲ.

ಚುನಾವಣಾ ಆಯೋಗಕ್ಕೆ ಆಜೀವ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಮತ್ತೊಂದು ಅರ್ಜಿಯೂ ಸರ್ವೋಚ್ಚ ನ್ಯಾಯಾಲಯದ ಮುಂದಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries