ತಿರುವನಂತಪುರಂ: ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಘರ್ಷಣೆಗೆ ಕೂಗಾಟ ಮತ್ತು ಕಲ್ಲು ತೂರಾಟ ಕಾರಣ ಎಂದು ಪೋಲೀಸರು ಹೇಳಿದ್ದಾರೆ. ಎಸ್‍ಎಫ್‍ಐ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಕೂಗಾಟವೇ ಕಾರಣ ಎಂದು ಪೋಲೀಸರು ತಿಳಿಸಿದ್ದಾರೆ.
ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಪೋಲೀಸರು ಹೇಳುತ್ತಾರೆ. ಘರ್ಷಣೆಯ ನಂತರ, ಪೋಲೀಸರು ಆ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದರು.
ಯೂತ್ ಕಾಂಗ್ರೆಸ್ ಮುಷ್ಕರ ಆರಂಭಿಸಲು ಆಯ್ಕೆ ಮಾಡಿದ ಸ್ಥಳ ಸರಿಯಾಗಿಲ್ಲ ಎಂದು ಪೋಲೀಸರು ಅಂದಾಜಿಸಿದ್ದಾರೆ. ವಿಶ್ವವಿದ್ಯಾಲಯದ ಹಾಸ್ಟೆಲ್ ಆವರಣದಿಂದ ಮುಷ್ಕರ ಆರಂಭವಾಗಬಾರದಿತ್ತು ಎಂದು ಪೆÇಲೀಸರು ಹೇಳಿದ್ದಾರೆ. ಹಾಸ್ಟೆಲ್ ಆವರಣದಿಂದ ಮುಷ್ಕರ ಆರಂಭವಾದುದೇ ಘರ್ಷಣೆಗೆ ಕಾರಣ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ.

