HEALTH TIPS

ವಿಶ್ವ ಹೃದಯ ದಿನಾಚರಣೆ- ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ


ಕಾಸರಗೋಡು
: ವಿಶ್ವ ಹೃದಯ ದಿನಾಚರಣೆಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ  ಪೆÇಯಿನಾಚಿ ಸೆಂಚುರಿ ಡೆಂಟಲ್ ಕಾಲೇಜಿನಲ್ಲಿ ಜರುಗಿತು. ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ ಸಮಾರಂಭ ಉದ್ಘಾಟಿಸಿದರು. ಚೆಮ್ನಾಡು ಗ್ರಾಮ ಪಂಚಾಯಿತಿ ಸದಸ್ಯೆ ಮಿನಿ ಶಶಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎಂ. ರಾಜೇಶ್ ಅವರು ಮುಖ್ಯ ಭಾಷಣ ಮಾಡಿದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಮಾರಿಯಾ ಮಹಿನ್, ಸೆಂಚುರಿ ಡೆಂಟಲ್ ಕಾಲೇಜಿನ ನಿರ್ದೇಶಕ ಡಾ. ಎ.ವಿ. ರಾಮದಾಸ್, ತಾಂತ್ರಿಕ ಸಹಾಯಕ ಎಂ. ಚಂದ್ರನ್, ಜಿಲ್ಲಾ ವಾಹಕ-ಜನ್ಯ ರೋಗ ನಿಯಂತ್ರಣಾಧಿಕಾರಿ ಗಿರೀಶ್ ಕುಮಾರ್ ಕೆ.ವಿ., ಜಿಲ್ಲಾ ಬಾಯಿ ಆರೋಗ್ಯ ನೋಡಲ್ ಅಧಿಕಾರಿ ಡಾ. ಸ್ಮಿತಾ ಕೆ.ಬಿ. ಮತ್ತು ಕುಟುಂಬ ಆರೋಗ್ಯ ಕೇಂದ್ರದ (ಚಟ್ಟಂಚಾಲ್) ವೈದ್ಯಾಧಿಕಾರಿ ಡಾ. ಅಮೂಲ್ಯ ಎಂ.ಟಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು.  ಸಹಾಯಕ ಅಧಿಕಾರಿ ಪಿ.ಪಿ. ಹಸೀಬ್ ವಂದಿಸಿದರು.

ಈ ಸಂದರ್ಭ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾ ಸಹಾಯಕ ವೈದ್ಯಾಧಿಕಾರಿ  ಡಾ. ಅಜಯ್ ರಾಜನ್ ತರಗತಿ ನಡೆಸಿದರು. ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು  ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾಸರಗೋಡು ಇವುಗಳ ಸಹಯೋಗದಲ್ಲಿ ಕಾರ್ಯಖ್ರಮ ಆಯೋಜಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries