HEALTH TIPS

ಜಾನಪದ ಗಾಯಕಿ ನೇಹಾ ಸಿಂಗ್‌ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ: ಪ್ರಕರಣ ದಾಖಲು

ನವದೆಹಲಿ: 'ಜಾನಪದ ಗಾಯಕಿ ನೇಹಾ ಸಿಂಗ್‌ ರಾಥೋರ್‌ ಅವರ ಹೆಸರನ್ನು ಅಕ್ರಮ ವೇಶ್ಯಾವಾಟಿಕೆ ಜಾಲಕ್ಕೆ ತಳಕುಹಾಕಿ ಸುದ್ದಿ ವಾಹಿನಿಯೊಂದು ಮಾನಹಾನಿಕರ ಸುದ್ದಿ ಪ್ರಸಾರ ಮಾಡಿದೆ' ಎಂಬ ಆರೋಪದಡಿ ರಾಷ್ಟ್ರೀಯ ಮಹಿಳಾ ಆಯೋಗವು ಸೋಮವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. 


ಸುದ್ದಿ ವಾಹಿನಿಯು ರಾಥೋರ್‌ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿ ಸುದ್ದಿ ಪ್ರಸಾರ ಮಾಡಿತ್ತು. 'ನನ್ನನ್ನು ಲೈಂಗಿಕ ಕಾರ್ಯಕರ್ತೆ ಎಂಬಂತೆ ಬಿಂಬಿಸುವ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡಲು ಯತ್ನಿಸಲಾಗಿದೆ' ಎಂದು ಗಾಯಕಿಯು ಆರೋಪಿಸಿದ್ದಾರೆ.

'ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾದ ನಂತರ, ಸುದ್ದಿ ವಾಹಿನಿಯು ಕ್ಷಮೆಯಾಚಿಸಿದೆ. ಮಾಧ್ಯಮದ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು. ಮಹಿಳೆಯರ ಘನತೆ, ಗೋಪ್ಯತೆಗೆ ಸೂಕ್ತ ಗೌರವ ನೀಡಬೇಕು' ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್‌ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries