ಕೋಲ್ಕತ್ತ: ದುರ್ಗಾಪೂಜಾ ಪೆಂಡಾಲ್‌ನಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಲೋಕಸಭಾ ಸಂಸದ ಹಾಗೂ ಮಮತಾ ಬ್ಯಾನರ್ಜಿ ಅವರ ಆಪ್ತ ಕಲ್ಯಾಣ್ ಬ್ಯಾನರ್ಜಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ದುರ್ಗಾದೇವಿಯ ವಿಗ್ರಹದ ಪಕ್ಕದಲ್ಲಿ ಕುಳಿತು ಸಂಸ್ಕೃತ ಶ್ಲೋಕ ಪಠಿಸಿದ ಅವರು, 'ಅಮ್ಮಾ, ನನಗೆ ಬುದ್ಧಿ ಕೊಡು, ಶಕ್ತಿ ಕೊಡು, ಜ್ಞಾನ ಕೊಡು, ಭಕ್ತಿ ಕೊಡು' ಎಂದು ಪ್ರಾರ್ಥಿಸಿದ್ದಾರೆ.
ಪ್ರತಿ ವರ್ಷ ಹೂಗ್ಲಿಯ ಶೀರಾಪುರ ರೈಲ್ವೆ ನಿಲ್ದಾಣದ ಬಳಿಯ ಆರ್‌ಎಂಎಸ್ ಮೈದಾನದಲ್ಲಿ ಕಲ್ಯಾಣ್ ಬ್ಯಾನರ್ಜಿ ದುರ್ಗಾಪೂಜೆಯನ್ನು ಆಯೋಜಿಸುತ್ತಿದ್ದರು. ಆದರೆ, ಈ ವರ್ಷ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಅದೇ ಮೈದಾನದಲ್ಲಿ ದುರ್ಗಾಪೂಜೆ ಆಯೋಜಿಸಿದ್ದರಿಂದ, ತಮ್ಮ ನಿವಾಸದ ಬಳಿ ಪೂಜೆ ನೆರವೇರಿಸಿದ್ದಾರೆ.
ಇದಕ್ಕೂ ಮುನ್ನ, ದುರ್ಗಾಪೂಜಾ ಪೆಂಡಾಲ್‌ವೊಂದರಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಅವರು, ಕೋಲ್ಕತ್ತಾ ಪೊಲೀಸರೇ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದರು. ಈ ದುರಂತದಲ್ಲಿ 19 ಮಂದಿ ಮೃತಪಟ್ಟಿದ್ದರು.
VIDEO | Kolkata: TMC MP Kalyan Banerjee performs aarti, offers prayers to Goddess Durga at his Ganga Darshan residence.
(Full video available on PTI Videos - ptivideos.com)


