HEALTH TIPS

'ಆಸ್ಕರ್ ಕ್ಲೀನ್ ಮೆಡಲ್‌'ಗೆ ಬೆಂಗಳೂರಿನ ವಿಜ್ಞಾನಿ ಅಶೋಕ್‌ ಸೇನ್‌ ಆಯ್ಕೆ

ನವದೆಹಲಿ:  ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ(ಟಿಐಎಫ್‌ಆರ್‌) ಸೈದ್ಧಾಂತಿಕ ಭೌತವಿಜ್ಞಾನಿ ಅಶೋಕ್‌ ಸೇನ್‌ ಅವರನ್ನು ಪ್ರತಿಷ್ಠಿತ 'ಆಸ್ಕರ್ ಕ್ಲೀನ್‌ ಮೆಡಲ್‌'ಗೆ ಗುರುವಾರ ಆಯ್ಕೆ ಮಾಡಲಾಗಿದೆ.


ಈ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅಶೋಕ್‌ ಸೇನ್ ಪಾತ್ರರಾಗಿದ್ದಾರೆ.

ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರಲ್ಲಿ ನೊಬೆಲ್‌ ಪುರಸ್ಕೃತ ಸ್ಟೀಫನ್‌ ಹಾಕಿಂಗ್‌, ಪೀಟರ್‌ ಹಿಗ್ಸ್‌ ಅವರಂತಹ ಭೌತವಿಜ್ಞಾನಿಗಳೂ ಸೇರಿದ್ದಾರೆ.

ಅಶೋಕ್‌ ಸೇನ್‌ ಅವರು ಟಿಐಎಫ್‌ಆರ್‌ನ ಇಂಟರ್‌ನ್ಯಾಷನಲ್ ಸೆಂಟರ್‌ ಫಾರ್ ಥಿಯರಿಟಿಕಲ್ ಸೈನ್ಸಸ್‌ನಲ್ಲಿ(ಐಸಿಟಿಎಸ್‌) ಕಾರ್ಯನಿರ್ವಹಿಸುತ್ತಿದ್ದಾರೆ. ಸೇನ್‌ ಅವರನ್ನು 'ಸ್ಟ್ರಿಂಗ್‌ ಥಿಯರಿ'ಯ ಪ್ರವರ್ತಕರಲ್ಲೊಬ್ಬರು ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗುತ್ತಿದೆ.

'ಸ್ಟ್ರಿಂಗ್‌ ಥಿಯರಿ' ಎಂಬುದು ಭೌತವಿಜ್ಞಾನದ ಶಾಖೆ. ಬ್ರಹ್ಮಾಂಡದ ಎಲ್ಲ ಕೌತುಕಗಳನ್ನು 'ಏಕೀಕೃತ ಸಿದ್ಧಾಂತ'ದ ಮೂಲಕ ವಿವರಿಸಲು ಈ ಸಿದ್ಧಾಂತ ಪ್ರಯತ್ನಿಸುತ್ತದೆ.

'ಇದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿ ಲಭಿಸಿರುವುದು ವಿಶ್ವದ ಭೌತವಿಜ್ಞಾನಿಗಳಲ್ಲಿ ಅಶೋಕ್‌ ಸೇನ್‌ ಅವರಿಗೆ ಇರುವ ಮಾನ್ಯತೆಯನ್ನು ತೋರಿಸುತ್ತದೆ' ಎಂದು ಐಸಿಟಿಎಸ್‌ ನಿರ್ದೇಶಕ ರಾಜೇಶ್‌ ಗೋಪಕುಮಾರ್‌ 'ಪ್ರಜಾವಾಣಿ'ಗೆ ಹೇಳಿದ್ದಾರೆ.

ಸೈದ್ಧಾಂತಿಕ ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಅಸಾಧಾರಣ ಸಂಶೋಧನೆ ಕೈಗೊಳ್ಳುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಸ್ಟಾಕ್‌ಹೋಮ್‌ ವಿಶ್ವವಿದ್ಯಾಲಯ ಹಾಗೂ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಭೌತವಿಜ್ಞಾನಕ್ಕೆ ಸಂಬಂಧಿಸಿದ ನೊಬೆಲ್‌ ಸಮಿತಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಿವೆ.

ಸಾಧನೆ: ಮೂಲಭೂತ ಭೌತವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗೆ ನೀಡುವುದಕ್ಕಾಗಿ 2012ರಲ್ಲಿ 'ಬ್ರೇಕ್‌ಥ್ರೂ ಪ್ರಶಸ್ತಿ'ಯನ್ನು ಸ್ಥಾಪಿಸಲಾಯಿತು. ಮೊದಲ ಪ್ರಶಸ್ತಿಯನ್ನು ಅಶೋಕ್‌ ಸೇನ್‌ ಅವರಿಗೆ ಪ್ರದಾನ ಮಾಡಲಾಗಿದೆ.

ಡಿರಾಕ್‌ ಮೆಡಲ್, ಇನ್ಫೊಸಿಸ್‌ ಪ್ರಶಸ್ತಿಗೂ(1998) ಇವರು ಭಾಜನರಾಗಿದ್ದಾರೆ. ಖ್ಯಾತ ಖಗೋಳ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಅವರು ರಾಯಲ್‌ ಸೊಸೈಟಿ ಫೆಲೋಶಿಪ್‌ಗೆ ಸೇನ್‌ ಅವರನ್ನು ನಾಮನಿರ್ದೇಶನ ಮಾಡಿದ್ದರು.

ರಾಜೇಶ್‌ ಗೋಪಕುಮಾರ್‌, ಐಸಿಟಿಎಸ್‌ ನಿರ್ದೇಶಕ ಭಾರತದಲ್ಲಿ ಭೌತವಿಜ್ಞಾನಕ್ಕೆ ಭದ್ರ ಬುನಾದಿ ಇದೆ ಎಂಬುದನ್ನು ಅಶೋಕ್‌ ಸೇನ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ತೋರಿಸುತ್ತದೆ. ವಿಜ್ಞಾನದ ಈ ಶಾಖೆಯಲ್ಲಿ ಮತ್ತಷ್ಟು ಸಂಶೋಧನೆ ಕೈಗೊಳ್ಳಲು ಬೆಂಬಲ ಮತ್ತು ಪ್ರೋತ್ಸಾಹದ ಅಗತ್ಯ ಇದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries