ಮಂಜೇಶ್ವರ: ದೈಗೋಳೀಯ ಜ್ಞಾನೋದಯ ಸಮಾಜ ವತಿಯಿಂದ ಇತ್ತೀಚೆಗೆ ಕನ್ನಡ ಚಿತ್ರರಂಗದ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಪುರಸ್ಕøತೆ ಹಾಗೂ ತುಳು ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಮಿತಿಯ ಉಪಾಧ್ಯಕ್ಷ ಬಾಬು ಮೂಲ್ಯ ದೈಗೋಳಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ್ ಪ್ರಸಾದ್ ಅಡೆಕಳಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಂತ ಕುಮಾರಿ, ಗೋಪಾಲಕೃಷ್ಣ ಪಜ್ವ, ಶೋಭಾ ಸೋಮಪ್ಪ ಹಾಗೂ ಹೂವಯ್ಯ ನೂಜಿ ಪಾಲ್ಗೊಂಡಿದ್ದರು. ವಿದ್ವಾನ್ ಕುರಿಯ ರಾಮಮೂರ್ತಿ ಧಾರ್ಮಿಕ ಸಂದೇಶ ನೀಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಪಿ. ಶಿವರಾಮ ಭಟ್, ಕಾರ್ಯಾಧ್ಯಕ್ಷ ಪಜ್ವ ಸತ್ಯನಾರಾಯಣ ಭಟ್, ಪ್ರಧಾನ ಸಂಚಾಲಕ ಬಿ.ವಿ. ರಾಜಗೋಪಾಲ್ ಹಾಗೂ ಮಹಿಳಾ ಸಮಿತಿ ಅಧ್ಯಕ್ಷೆ ಡಾ. ವಿಜಯಲಕ್ಷ್ಮೀ ಶರ್ಮಾ ಉಪಸ್ಥಿತರಿದ್ದರು.
ಸುಧೀರ್ ರಂಜನ್ ಸ್ವಾಗತಿಸಿ, ಮಾಧವ ಶೆಟ್ಟಿಗಾರ್ ವಂದಿಸಿದರು. ಗಣೇಶ್ ಭಟ್ ಮಾಸ್ತರ್ ನಿರೂಪಿಸಿದರು.

.jpg)
