HEALTH TIPS

ಧರ್ಮ-ರಾಷ್ಟ್ರದ ನಂಟು ಬೇರ್ಪಡಿಸಲಾಗದಷ್ಟು ಗಾಢ. ವಿಶ್ವದ ಇಂದಿನ ತೊಳಲಾಟಕ್ಕೆ ಭಾರತದ ಆಧ್ಯಾತ್ಮಿಕ ಜ್ಞಾನವೇ ದಾರಿದೀಪ: ಮೋಹನ್ ಭಾಗವತ್

 ನವದೆಹಲಿ: ಭಾರತದಲ್ಲಿ ಧರ್ಮ ಮತ್ತು ರಾಷ್ಟ್ರವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಜಗತ್ತು ಎದುರಿಸುತ್ತಿರುವ ಹಲವು ಸವಾಲುಗಳಿಗೆ ಭಾರತದ ಆಧ್ಯಾತ್ಮಿಕ ಜ್ಞಾನ ಪರಿಹಾರ ನೀಡಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ. 


ಅಖಿಲ ಭಾರತ ವಿಹಾರ ಸೇವಾ ಸಮೂಹದ 14ನೇ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ರಾಷ್ಟ್ರ ಮತ್ತು ಧರ್ಮ ಪ್ರತ್ಯೇಕವಲ್ಲ. ರಾಷ್ಟ್ರದ ಉದ್ದೇಶ ಧರ್ಮವಾಗಿದ್ದು, ಧರ್ಮವು ರಾಷ್ಟ್ರವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಇವೆರಡೂ ಪರಸ್ಪರ ಅವಲಂಬಿತವಾಗಿವೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕುಟುಂಬ ಜೀವನ, ಧಾರ್ಮಿಕ ನಂಬಿಕೆ ಮತ್ತು ಸಂಘರ್ಷ ಸೇರಿದಂತೆ ಹಲವು ವಿಚಾರಗಳಲ್ಲಿ ಜಗತ್ತು ದ್ವಂದ್ವಗಳನ್ನು ಎದುರಿಸುತ್ತಿದೆ.

ಜಗತ್ತು ಸಂಕಷ್ಟದಲ್ಲಿದೆ. ಪ್ರತಿಯೊಂದು ಸಂತೋಷವೂ ಅಪೂರ್ಣವಾಗಿಯೇ ಉಳಿಯುತ್ತದೆ, ಪ್ರತಿಯೊಂದು ಆಶಯವೂ ಯಾವುದೋ ಒಂದು ನಷ್ಟದೊಂದಿಗೆ ಬರುತ್ತದೆ ಮತ್ತು ಪ್ರತಿಯೊಂದು ನಿಷ್ಠೆಯೂ ಮತ್ತೊಂದು ನಿಷ್ಠೆಯೊಂದಿಗೆ ಬೆಸೆದುಕೊಂಡಿದೆ. ಸಮತೋಲನ ಕಾಣುತ್ತಿಲ್ಲ; ತೀವ್ರತೆ ಹೆಚ್ಚಾಗಿದೆ ಎಂದು ಹೇಳಿದರು.

ಈ ವೈರುಧ್ಯಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳಿಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ. ಭಾರತವು ಐತಿಹಾಸಿಕವಾಗಿ ಇತರ ದೇಶಗಳನ್ನು ವಶಪಡಿಸಿಕೊಳ್ಳುವ ಅಥವಾ ಅಲ್ಲಿನ ಜನರನ್ನು ಮತಾಂತರಗೊಳಿಸುವ ಉದ್ದೇಶವಿಲ್ಲದೆ ತನ್ನ ಜ್ಞಾನವನ್ನು ಜಗತ್ತಿನೊಂದಿಗೆ ಹಂಚಿಕೊಂಡಿದೆ ಎಂದು ಸ್ಮರಿಸಿದರು.

ಈ ಮಾರ್ಗ ಭಾರತದಿಂದಲೇ ದೊರೆಯಲಿದೆ ಎಂಬುದು ಜಗತ್ತಿಗೆ ತಿಳಿದಿದೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಜೈನ ಆಗಮಗಳು, ತ್ರಿಪಿಟಕ, ಗುರು ಗ್ರಂಥ ಸಾಹಿಬ್ ಹಾಗೂ ಸಂತ-ಸಾಧುಗಳ ಬೋಧನೆ ಸೇರಿದಂತೆ ಭಾರತದ ವಿಶಾಲ ಜ್ಞಾನ ಪರಂಪರೆಯನ್ನು ಅವರು ಉಲ್ಲೇಖಿಸಿದರು.

ನಮ್ಮ ದೇಶದಲ್ಲಿ ಜ್ಞಾನದ ಅತ್ಯಂತ ದೊಡ್ಡ ಸಂಪತ್ತು ಇದೆ. ಇಂದು ಜಗತ್ತಿಗೆ ಈ ಜ್ಞಾನದ ಅಗತ್ಯವಿದೆ. ಭಕ್ತಿಯ ಶಕ್ತಿಯ ಮೂಲಕ ಪರಮಾತ್ಮನಿಗೆ ಹತ್ತಿರವಾಗಬಹುದು.

ಈ ಜ್ಞಾನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಜನರ ಬದುಕು ಮತ್ತು ಸಂಪ್ರದಾಯಗಳನ್ನು ರಕ್ಷಿಸುವುದು ಕೇವಲ ಧಾರ್ಮಿಕ ಹೊಣೆಗಾರಿಕೆಯಲ್ಲ, ಮಾನವಕುಲಕ್ಕೆ ಸಲ್ಲಿಸುವ ಸೇವೆಯೂ ಆಗಿದೆ. ನೀವು ಕೇವಲ ಒಬ್ಬ ವ್ಯಕ್ತಿಯ ಬದುಕನ್ನು ರಕ್ಷಿಸುತ್ತಿಲ್ಲ. ಇಡೀ ಮಾನವಕುಲದ ಸುರಕ್ಷಿತ ಭವಿಷ್ಯವನ್ನು ರಕ್ಷಿಸುತ್ತಿದ್ದೀರಿ ಎಂದು ತಿಳಿಸಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries