ತಿರುವನಂತಪುರಂ: ರಾಷ್ಟ್ರ ರಾಜಧಾನಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮತ್ತು ಸಿಜೆಪಿ ನಡೆಸಿದ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಕೇರಳದಲ್ಲೂ ಪ್ರತಿಭಟನೆಗಳು ಬಿರುಸುಗೊಂಡಿವೆ. ತಿರುವನಂತಪುರಂನ ಮಾನವೀಯಂ ವೀಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಭಾಗವಹಿಸಿ ತಮ್ಮ ನಿಲುವನ್ನು ವ್ಯಕ್ತಪಡಿಸಿದರು.
‘ಕೇರಳದ ಜನರಿಗೆ ನನ್ನ ನಿಲುವು ಇಷ್ಟವಾಗಿದೆ. ನನ್ನ ನಿಲುವಿನ ಬಗ್ಗೆ ಕೇರಳಕ್ಕೆ ಚೆನ್ನಾಗಿ ತಿಳಿದಿದೆ. ಹೇಡಿಗಳು ಜಿರಳೆಗಳಿಗೆ ಹೆದರುತ್ತಾರೆ’ ಎಂದು ಪ್ರಕಾಶ್ ರಾಜ್ ಹೇಳಿದರು.
ಕರ್ನಾಟಕದಲ್ಲೂ ಪ್ರತಿಭಟನಾ ರ‍್ಯಾಲಿ
ಇದೇ ವೇಳೆ ಕರ್ನಾಟಕದಲ್ಲೂ ಪ್ರತಿಭಟನಾ ರ‍್ಯಾಲಿ ನಡೆಯಿತು. ಬೆಂಗಳೂರಿನ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ಆಯೋಜಿಸಲಾಗಿತ್ತು.
ಸಿಜೆಪಿ ಮತ್ತು ಐಸಾ ಕಾರ್ಯಕರ್ತರು ಜಂಟಿಯಾಗಿ ಈ ಪ್ರತಿಭಟನೆಯನ್ನು ನಡೆಸಿದರು. ಆದರೆ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು ಎಂದು ವರದಿ ತಿಳಿಸಿದೆ.



