ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿಯ ವತಿಯಿಂದ ಕಾಸರಗೋಡು ಜಿಲ್ಲೆಗೆ ಹೊಸದಾಗಿ ನಿಯೋಜಿಸಲ್ಪಟ್ಟ ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಅವರನ್ನು ಹೂಗುಚ್ಛ ಮತ್ತು ಸಂಘಟನೆಯ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಈ ಸಂದರ್ಭ ಕಾಸರಗೋಡು ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿ ರಾಜ್ಯ ಅಧ್ಯಕ್ಷ ಐ. ಲಕ್ಷ್ಮಣ ಪೆರಿಯಡ್ಕ, ರಾಜ್ಯ ಕಾರ್ಯದರ್ಶಿ ಕೆ. ಕೆ. ಸ್ವಾಮಿಕೃಪಾ. ಜಿಲ್ಲಾ ಸಮಿತಿ ಚಂದ್ರ, ಸಿಬಿ ಅಡೂರು, ಕಾರ್ಯದರ್ಶಿ ರಮೇಶ್ ಬನ್ನೂರು, ರಾಘವನ್, ಬೇಡು, ಕುಸುಮ ಚೆನೆಕ್ಕೋಡು ಉಪಸ್ಥಿತರಿದ್ದರು. ಜಿಲ್ಲಾಕಾರಿಗಳಿಗೆ ಸಮುದಾಯ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಬಗ್ಗೆ ಸವಿಸ್ತಾರವಾದ ಮನವಿಯನ್ನು ನೀಡಲಾಯಿತು.

.jpg)
