HEALTH TIPS

ಅಶೋಕ್ ಸಿಂಘಾಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಾಗ್ಪುರ ಜಿಲ್ಲೆಯ ದೇವೋಲಾಪುರದಲ್ಲಿ ಹಲವು ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಸಮಾಜ ಮತ್ತು ಜಗತ್ತಿನ ಸುರಕ್ಷತೆ ಹಾಗೂ ಕಲ್ಯಾಣವನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಭಾರತದ ಸಂಪ್ರದಾಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ. 'ಜೀವನ, ಸಮಾಜ, ಧರ್ಮದ ಸುರಕ್ಷತೆ ಹಾಗೂ ಜಗತ್ತಿನ ಒಳಿತಿಗಾಗಿ ಸಂಪ್ರದಾಯ ಪಾಲಿಸಬೇಕಿದೆ. ಆ ಮೂಲಕ ಬದುಕನ್ನು ಯಶಸ್ವಿಗೊಳಿಸಬೇಕಿದೆ. ಪ್ರತಿಯೊಬ್ಬರೂ ತೃಪ್ತಿದಾಯಕ ಜೀವನ ನಡೆಸುವಂತಾಗಲು ಎಲ್ಲರೂ ಕೊಡುಗೆ ನೀಡಬೇಕು' ಎಂದಿದ್ದಾರೆ. ಸಮಾಜಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಇಷ್ಟು ದೊಡ್ಡ ಸಮಾಜದಲ್ಲಿ ಕೆಲವರು ಮಾತ್ರ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಸಾಕಾಗುವುದಿಲ್ಲ ಎಂದಿದ್ದಾರೆ. 'ನಮ್ಮ ಸಮಾಜವು ಹಬ್ಬಗಳ ಆಚರಣೆಯನ್ನು ಇಷ್ಟಪಡುತ್ತದೆ. ನಾವು ಅವುಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತೇವೆ. ಆದರೆ, ಸಮಾಜಕ್ಕಾಗಿ ಏನು ಮಾಡಬೇಕೆಂದು ಯಾರೂ ಯೋಚಿಸುವುದಿಲ್ಲ. ನಮ್ಮದೇ ಕೆಲಸ ಇದೆ. ಕುಟುಂಬದ ಪೋಷಣೆಯ ಹೊಣೆ ಇದೆ ಎಂದು ಜಾರಿಕೊಳ್ಳುತ್ತೇವೆ. ಬೇರೆ ಯಾರೋ ಸಮಾಜಕ್ಕಾಗಿ ದುಡಿಯಲಿ ಎಂದು ನಿರೀಕ್ಷಿಸುತ್ತೇವೆ' ಎಂದು ಭಾಗವತ್ ಹೇಳಿದ್ದಾರೆ. ಏನಾದರೊಂದು ಒಳಿತಾದರೆ, ಅದು ಇಡೀ ಸಮಾಜದ ಕೊಡುಗೆಯನ್ನು ಬಿಂಬಿಸುತ್ತದೆ. ಒಳ್ಳೆಯ ಕೆಲಸ ಮಾಡುವ ಮೂಲಕ ನಾವು ಸಮಾಜಕ್ಕೆ ಕೊಡುಗೆ ನೀಡಿದ ಒಳ್ಳೆಯ ಜನರನ್ನು ನೆನಪಿಸಿಕೊಳ್ಳಬಹುದು ಎಂದಿದ್ದಾರೆ. ಸಮಾಜಕ್ಕಾಗಿ ತಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡುವ ಜನರು, ಇತರರಿಗೆ ಸ್ಫೂರ್ತಿಯಾಗುತ್ತಾರೆ ಎಂದು ಭಾಗವತ್ ಹೇಳಿದ್ದಾರೆ.

ನವದೆಹಲಿ: ದಕ್ಷಿಣ ದೆಹಲಿಯ ಸತ್ಯನಿಕೇತನದಲ್ಲಿ ಐದು ಅಂತಸ್ತಿನ ಪಿಜಿ ಕಟ್ಟಡವೊಂದು ಕುಸಿದು ಬಿದ್ದು  7 ಮಂದಿ ಮೃತಪಟ್ಟ ಕೇವಲ ಒಂದು ತಿಂಗಳ ನಂತರ, ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಮತ್ತೊಂದು ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಮಧ್ಯಾಹ್ನ 3:30 ರ ಸುಮಾರಿಗೆ ಇಸ್ಗಾ ಮಚ್ಲಿ ಮಂಡಿ ಪ್ರದೇಶದ ಬಳಿ ಈ ಘಟನೆ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆ ಕುರಿತ ವರದಿ ಇಲ್ಲಿದೆ: 


ಏನಿದು ಘಟನೆ?

ದೆಹಲಿಯ ಸೀಮಾಪುರಿಯ ಈದ್ಗಾ ಮಸೀದಿ ಹಾಗೂ ಮೀನು ಮಾರುಕಟ್ಟೆಯ ಸಮೀಪವಿದ್ದ ಐದು ಅಂತಸ್ತಿನ ಕಟ್ಟಡವೊಂದು ಬುಧವಾರ ಮಧ್ಯಾಹ್ನ ಸರಿಸುಮಾರು 3:15 ರಿಂದ 3:30 ರ ಅವಧಿಯಲ್ಲಿ ದಿಢೀರನೆ ಕುಸಿದು ಬಿದ್ದಿದೆ. ಕಟ್ಟಡದ ಮುಂಭಾಗದ ಭಾಗವು ಕುಸಿದುಬಿದ್ದ ಪರಿಣಾಮ ಅವಶೇಷಗಳ ರಾಶಿ ರಸ್ತೆಯವರೆಗೂ ಆವರಿಸಿಕೊಂಡಿದೆ. ಏತನ್ಮಧ್ಯೆ, ದೆಹಲಿ ಅಗ್ನಿಶಾಮಕ ಸೇವೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries