ಸಮರಸ ಚಿತ್ರಸುದ್ದಿ: ಬದಿಯಡ್ಕ: ಕ್ಯಾಂಪ್ಕೋ ಸಾಂತ್ವನ ಚಿಕಿತ್ಸಾ ಧನಸಹಾಯ ಯೋಜನೆಯಡಿ ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ಕ್ಯಾಂಪ್ಕೋ ಸದಸ್ಯರಿಗೆ ನೀಡಲಾಗುವ ಚಿಕಿತ್ಸಾ ಧನಸಹಾಯದ ಅಂಗವಾಗಿ, ಕರಿಂದಳ ಬೇಂಗಲಂ ನಿವಾಸಿ ತಂಬಾನ್ ಕೆ. ಅವರಿಗೆ ರೂ 50,000 ಮೊತ್ತದ ಧನಸಹಾಯದ ಚೆಕ್ ಅನ್ನು ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣನ್ ಕರಿಂಬಿಲ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ., ನೀಲೇಶ್ವರ ಶಾಖಾ ವ್ಯವಸ್ಥಾಪಕ ಪದ್ಮನಾಭನ್ ಕೆ.ವಿ. ಹಾಗೂ ಕರಿಂದಳ ಪಂಚಾಯತಿ ಮಟ್ಟದ ಸೇವಾಭಾರತಿ ಅಧ್ಯಕ್ಷ ದಾಮೋದರನ್ ಎ.ವಿ. ಉಪಸ್ಥಿತರಿದ್ದರು.

.jpg)
