HEALTH TIPS

ಗಾಝಾದಲ್ಲಿ ಹಮಾಸ್ ಆಡಳಿತವಿರುವುದಿಲ್ಲ: ನೆತನ್ಯಾಹು ಹೇಳಿಕೆ

ಟೆಲ್ ಅವೀವ್: ಹಮಾಸ್ ಗುಂಪು ಅಕ್ಟೋಬರ್ 7, 2023 ರಂದು ನಡೆಸಿದ ದಾಳಿಗೆ ಮೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಝಾದಲ್ಲಿ ಹಮಾಸ್ ಆಡಳಿತವಿರುವುದಿಲ್ಲ ಎಂದು ಶಪಥ ಮಾಡಿದರು.


ಸೋಮವಾರವನ್ನು ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಭೀಕರ ದಿನದ ರಾಷ್ಟ್ರೀಯ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತಿದ್ದು, ದಾಳಿ ಪ್ರಾರಂಭವಾದ ಬೆಳಗಿನ ಸಮಯ 6:29ರಿಂದ ಸಾರ್ವಜನಿಕ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ತಗ್ಗಿಸಲಾಯಿತು.

ಜೆರುಸಲೇಂನ ಮೌಂಟ್ ಹೆಜ್ರ್ಲ್ ಮಿಲಿಟರಿ ಸ್ಮಶಾನದಲ್ಲಿ ನಡೆದ ಸರಕಾರಿ ಸಮಾರಂಭದಲ್ಲಿ ಮಾತನಾಡಿದ ನೆತನ್ಯಾಹು `ನಾವು ಬೃಹತ್ ಸಾಧನೆಗಳನ್ನು ಮಾಡಿದ್ದೇವೆ, ಆದರೆ ನಮ್ಮ ಮುಂದೆ ಇನ್ನೂ ಹಲವು ಗುರಿ ಮತ್ತು ಸವಾಲುಗಳಿವೆ ಮತ್ತು ನಾವು ಅವುಗಳನ್ನು ಪೂರ್ಣಗೊಳಿಸಲು ಬದ್ಧರಾಗಿದ್ದೇವೆ. ಗಾಝಾದಲ್ಲಿ ಯಾವುದೇ ಕಾರಣಕ್ಕೂ ಹಮಾಸ್ ಆಡಳಿತವಿರುವುದಿಲ್ಲ' ಎಂದು ಪುನರುಚ್ಚರಿಸಿದರು.

ಹಿಜ್ಬುಲ್ಲಾ ವಿರುದ್ಧದ ದಾಳಿಯನ್ನು ಮುಂದುವರಿಸುವುದಾಗಿ ವಾಗ್ದಾನ ಮಾಡಿದ ನೆತನ್ಯಾಹು ಇರಾನ್‍ನ ನಾಯಕತ್ವದ ವಿರುದ್ಧವೂ ವಾಗ್ದಾಳಿ ನಡೆಸಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries