ಉನ್ನಾವ್: ಸೆಂಟ್ರಲ್ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿದ್ದ 'ಲೆಹರಾ ದೋ ತಿರಂಗಾ' ಪ್ರತಿಭಟನೆಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಇಡೀ ಚಳವಳಿಯು ಖ್ಯಾತ ಉದ್ಯಮಿ ಎಲಾನ್ ಮಾಸ್ಕ್ ಅವರ ಇರಾದೆ ಮೇಲೆಯೇ ನಡೆಯುತ್ತಿದೆ' ಎಂದು ಆರೋಪಿಸಿದ್ದಾರೆ.
'ಇದು ನಮ್ಮ ದೇಶದ ವಿರುದ್ಧ ಹೆಣೆದಿರುವ ದೊಡ್ಡ ಸಂಚು. ಭಾರತವನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳಿಗೆ ಹೋಲಿಸಿ ದೇಶದ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಸುಪ್ರೀಂ ಕೋರ್ಟ್ ಅನ್ನು ಬೆದರಿಸುವ ಸ್ಪಷ್ಟ ಉದ್ದೇಶದಿಂದಲೇ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಪಾದಯಾತ್ರೆಯನ್ನು ಸಂಘಟಿಸಲಾಗಿದೆ. ಅಲ್ಲದೇ ತಮ್ಮದೇ ಷರತ್ತುಗಳ ಮೇಲೆ ಭಾರತದಲ್ಲಿ ವ್ಯಾಪಾರ -ವಹಿವಾಟು ನಡೆಸಲು ಬಯಸುವ ವಿದೇಶಿ ಶಕ್ತಿಗಳು ಈ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ' ಎಂದೂ ಆಪಾದಿಸಿದ್ದಾರೆ.


