HEALTH TIPS

ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಉದ್ಘೋಷ ಲೋಪ: ಹಳಿ ದಾಟಿದ ಪ್ರಯಾಣಿಕರು-ಕೂದಳೆಳೆ ಅಂತರದಲ್ಲಿ ಅವಘಡದಿಂದ ಪಾರು

ಕೋಝಿಕ್ಕೋಡ್: ರೈಲು ಕೋಝಿಕ್ಕೋಡ್ ರೈಲು ನಿಲ್ದಾಣಕ್ಕೆ ಬರುವ ಪ್ಲಾಟ್‍ಫಾರ್ಮ್ ಸಂಖ್ಯೆಯ ತಪ್ಪು ಘೋಷಣೆಯು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿತು. ಪ್ಲಾಟ್‍ಫಾರ್ಮ್‍ನಲ್ಲಿ ರೈಲು ಆಗಮನವನ್ನು ಘೋಷಿಸುವಲ್ಲಿ ತಪ್ಪು ಹೇಳಿಕೆ ನೀಡಿದ್ದು, ಪ್ರಯಾಣಿಕರು ಮೊದಲ ಪ್ಲಾಟ್‍ಫಾರ್ಮ್ ನಿಂದ ಮೂರನೇ ಪ್ಲಾಟ್‍ಫಾರ್ಮ್‍ಗೆ ಹಳಿಗಳನ್ನು ದಾಟಲು ಓಡಿದರು. ಅಷ್ಟರಲ್ಲಿ ಅದೇ ಹಳಿಯಲ್ಲಿ ಬೇರೊಂದು ರೈಲು ಆಗಮಿಸಿದ್ದು ಹಳಿ ದಾಟುವವರು ಗಮನಿಸಿದ್ದರಿಂದ ಕೂದಳೆಳೆ ಅಂತರದಲ್ಲಿ ದೊಡ್ಡ ಅವಘಡದಿಂದ ಪಾರಾದರು. 


ರೈಲು ಆಗಮಿಸುವ ಅಲ್ಪ ಸಮಯದ ಮೊದಲು ತಪ್ಪು ಘೋಷಣೆ ಮಾಡಲಾಯಿತು. ಪ್ಲಾಟ್‍ಫಾರ್ಮ್ ಸಂಖ್ಯೆಯನ್ನು ಬದಲಿಸಿ ಘೋಷಿಸಲಾಯಿತು. ರೈಲು ಯಾವ ಪ್ಲಾಟ್‍ಫಾರ್ಮ್‍ನಲ್ಲಿ ಬರುತ್ತದೆ ಎಂಬ ಬಗ್ಗೆ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು. ಪರಿಣಾಮವಾಗಿ, ಅನೇಕ ಜನರು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಹಳಿಗಳನ್ನು ದಾಟಿದರು.

ರೈಲು ಪ್ಲಾಟ್‍ಫಾರ್ಮ್ ಸಮೀಪಿಸುತ್ತಿರುವಾಗ ಪ್ರಯಾಣಿಕರು ಹಳಿಗಳನ್ನು ದಾಟಿದರು, ಇದು ದೊಡ್ಡ ಅಪಾಯವನ್ನು ಸೃಷ್ಟಿಸಲಿತ್ತು. ಯೋಗಾಯೋಗವೆಂಬಂತೆ ಹಲವರು ಪಾರಾದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries