HEALTH TIPS

ಕೊಲ್ಲಂಗಾನ ಶ್ರೀನಿಲಯದಲ್ಲಿ ನವರಾತ್ರಿ ಸಂಭ್ರಮಕ್ಕೆ ಚಾಲನೆ

 

ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ 38ನೇ ವಾರ್ಷಿಕೋತ್ಸವ ಆರಂಭ

ಬದಿಯಡ್ಕ: ಕೊಲ್ಲಂಗಾನ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ 38ನೇ ವಾರ್ಷಿಕೋತ್ಸವ ಭಾನುವಾರ ಭಕ್ತಿಭಾವದೊಂದಿಗೆ ಆರಂಭಗೊಂಡಿತು.


ಬೆಳಗ್ಗೆ ದೇವರ ಪ್ರತಿಷ್ಠಾಪನೆ ಹಾಗೂ ನವರಾತ್ರಿ ಪೂಜೆ ನೆರವೇರಿತು. ಸಂಜೆ ಮಾರ್ಪನಡ್ಕದ ಶ್ರೀ ಗೋಪಾಲಕೃಷ್ಣ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಡಿ ಅರಮನೆಯ ಹರಿಪ್ರಸಾದ ವರ್ಮ ರಾಜರು ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿಯೇ ಪರಶಕ್ತಿಯ ಸ್ವರೂಪವಾಗಿದ್ದು, ನವರಾತ್ರಿಯ ಒಂಬತ್ತು ದಿನಗಳೂ ದೇವಿಯ ಆರಾಧನೆಯೊಂದಿಗೆ ಪ್ರಕೃತಿಯನ್ನು ಗೌರವಿಸುವ ಸಂಕಲ್ಪ ಮಾಡಬೇಕು. ಎಲ್ಲರ ಮನೆಗಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಬ್ರಾಹ್ಮಣ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಚ್. ಸೂರ್ಯನಾರಾಯಣ ಭಟ್ ಪನತ್ತಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಶ್ರೀಚಕ್ರ ಆರಾಧಕ ಬ್ರಹ್ಮಶ್ರೀ ತಂತ್ರಿ ಗಣಾರಾಜ ಉಪಾಧ್ಯಾಯ ಆಶೀರ್ವಚನ ನೀಡಿ, ನವರಾತ್ರಿಯ ಮೊದಲ ದಿನ ಆರಾಧಿಸುವ ಮಾತಾ ಶೈಲಪುತ್ರಿಯು ಸ್ಥಿರತೆ, ಧೈರ್ಯ ಹಾಗೂ ಮಾನಸಿಕ ಶಾಂತಿಯ ಸಂಕೇತವಾಗಿದ್ದಾಳೆ ಎಂದರು.

ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸದಸ್ಯರಾದ ಶ್ಯಾಮಪ್ರಸಾದ ಮಾನ್ಯ, ಶ್ಯಾಮಪ್ರಸಾದ ಸರಳಿ ಹಾಗೂ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಉಪಸ್ಥಿತರಿದ್ದರು.

ಪ್ರೊ. ಎ. ಶ್ರೀನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೀಕ್ಷಾ ಸತೀಶ್ ಪ್ರಾರ್ಥಿಸಿದರು. ಅನಂತ ಪ್ರಜ್ವಲ್ ಉಪಾಧ್ಯಾಯ ವಂದಿಸಿದರು. ಹಿರಿಯರಾದ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.

ಬ್ರಹ್ಮಶ್ರೀ ತಂತ್ರಿ ಗಣಾರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ನವರಾತ್ರಿ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ನಡೆಯಿತು. ವಿಶೇಷ ಯಕ್ಷಗಾನ ಸೇವೆಯೂ ಭಕ್ತರ ಗಮನ ಸೆಳೆಯಿತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries