ಮಂಜೇಶ್ವರ: ಮೀಂಜ ಪಂಚಾಯತಿ ವ್ಯಾಪ್ತಿಯ ದುರ್ಗಿಪಳ್ಳ, ಅರಿಯಾಳ, ಬಾಳಿಯೂರು, ಬೆಜ್ಜ, ಮಜಿಬೈಲ್ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಮೀಂಜ ಪಂಚಾಯತಿ ಬಿಜೆಪಿ ಸದಸ್ಯೆ ಹಾಗೂ ಬ್ಲಾಕ್ ಸದಸ್ಯೆಯ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೆ. ಸುರೇಂದ್ರನ್‍ರ ಮೂಲಕ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜೊತೆಗೆ ಫಸಲ್ ಭೀಮ ಯೋಜನೆ ವಿಮಾದ ತಾಂತ್ರಿಕ ಕಾರಣ ಹೇಳಿ ನಷ್ಟ ಪರಿಹಾರ ತಡೆ ಹಿಡಿದಿರುವುದನ್ನು ಕೂಡಲೇ ಸರಿ ಪಡಿಸಬೇಕೆಂದು ಮನವಿ ನೀಡಲಾಯಿತು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ನೇತಾರರಾದ ವಿಜಯ್ ಕುಮಾರ್ ರೈ, ಬೆಜ್ಜ ಚಂದ್ರಹಾಸ, ಕೆ.ವಿ ಭಟ್, ನವೀನ್ ಬೆಜ್ಜ ಸದಸ್ಯರಾದ ಲತೀಶ್ ಮಜಿಬೈಲ್, ಮೋಹನ್, ಶಾಂತ ಕುಮಾರಿ, ಕೃಷ್ಣ ಬೆಜ್ಜ, ಸಂಧ್ಯಾ ಜ್ಯೋತಿ ರೈ, ಶಾಲಿನಿ ಶೆಟ್ಟಿ ಉಪಸ್ಥಿತರಿದ್ದರು.

.jpg)
