HEALTH TIPS

ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಅಧ್ಯಾಪಕಿಯನ್ನು ಬೋರ್ಡ್ ಆಫ್ ಸ್ಟಡೀಸ್ ಸದಸ್ಯೆಯನ್ನಾಗಿ ನೇಮಿಸಿದ ಕಾಲಿಕಟ್ ವಿಶ್ವವಿದ್ಯಾಲಯ

ಕೋಯಿಕ್ಕೋಡ್: ಒಂದೂವರೆ ವರ್ಷಗಳ ಹಿಂದೆಯೇ ಮೃತಪಟ್ಟ ಅಧ್ಯಾಪಕಿಯೊಬ್ಬರನ್ನು ಬೋರ್ಡ್ ಆಫ್ ಸ್ಟಡೀಸ್ ಸದಸ್ಯೆಯನ್ನಾಗಿ ನೇಮಿಸಿ ಕಾಲಿಕಟ್ ವಿಶ್ವವಿದ್ಯಾಲಯ ಎಡವಟ್ಟು ಮಾಡಿಕೊಂಡಿದೆ.


ವೈಲಂಬಲ್ಲೂರು ಎಂಇಎಸ್ ಅಸ್ಮಾಬಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಟಿ.ಎಂ. ಶಹೀದಾ ಅವರನ್ನು ಪರಿಸರ ವಿಜ್ಞಾನ ಮತ್ತು ಜಲ ನಿರ್ವಹಣಾ ಅಧ್ಯಯನ ಮಂಡಳಿಯ ಸದಸ್ಯೆಯನ್ನಾಗಿ ನೇಮಿಸಲಾಗಿದೆ.

ಶಹೀದಾ ಅವರು ಒಂದೂವರೆ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಈ ಹಿಂದೆ ಸಂಘಪರಿವಾರದ ಪರ ಒಲವು ಹೊಂದಿರುವ 32 ಮಂದಿ ಅಧ್ಯಾಪಕರನ್ನು ಬೋರ್ಡ್ ಆಫ್ ಸ್ಟಡೀಸ್ ಸದಸ್ಯರನ್ನಾಗಿ ನೇಮಿಸಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಮೃತಪಟ್ಟ ಅಧ್ಯಾಪಕಿಯನ್ನೂ ಸದಸ್ಯೆಯನ್ನಾಗಿ ನೇಮಿಸಿರುವುದು ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆಯ ಲೋಪವನ್ನು ಎತ್ತಿತೋರಿಸಿದೆ.

ಅಧ್ಯಯನ ಮಂಡಳಿಯ ಇತರ ಸದಸ್ಯರ ದೂರವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದ್ದು, ಮೃತಪಟ್ಟ ಅಧ್ಯಾಪಕಿಯ ದೂರವಾಣಿ ಸಂಖ್ಯೆಯನ್ನು ಮಾತ್ರ ನೀಡಿಲ್ಲ ಎಂಬುದಷ್ಟೇ ಸಮಾಧಾನದ ಸಂಗತಿಯಾಗಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries