HEALTH TIPS

ವಿದ್ಯಾರ್ಥಿ ಪ್ರತಿಭಟನೆಗಳನ್ನು ಸಹಾನುಭೂತಿಯಿಂದ ನಿಭಾಯಿಸಿ: ಬಿಜೆಪಿ ನಾಯಕ ಎಂ.ಎಂ.ಜೋಶಿ

ನವದೆಹಲಿ:  ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಬೇಕು ಎಂದು ಗುರುವಾರ ಹೇಳಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮುರಳಿ ಮನೋಹರ ಜೋಶಿಯವರು, ಅವರ ವಿರುದ್ಧ ಬಲಪ್ರಯೋಗವನ್ನು ಟೀಕಿಸಿದ್ದಾರೆ. 


ಇಲ್ಲಿ 21ನೇ ಫಿಕ್ಕಿ ಉನ್ನತ ಶಿಕ್ಷಣ ಶೃಂಗಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, 'ವಿದ್ಯಾರ್ಥಿಗಳು ನಮ್ಮ ಮಕ್ಕಳು ಮತ್ತು ಅವರನ್ನು ಅದೇ ರೀತಿಯಲ್ಲಿ ನೋಡಿಕೊಳ್ಳಬೇಕು' ಎಂದು ಹೇಳಿದರು.

ಹೆಚ್ಚುತ್ತಿರುವ ಪ್ರತಿಭಟನೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಜೋಶಿ,'ವಿದ್ಯಾರ್ಥಿಗಳ ಸಮಂಜಸ ಅಥವಾ ನ್ಯಾಯಸಮ್ಮತ ಬೇಡಿಕೆಗಳನ್ನು ಯಾವಾಗಲೂ ಆಲಿಸಬೇಕು ಮತ್ತು ಬಹಳಷ್ಟು ಸಹಾನುಭೂತಿಯಿಂದ ಕೇಳಬೇಕು. ಈ ರೀತಿ ಲಾಠಿ ಬೀಸುವ ಪದ್ಧತಿ ಸರಿಯಲ್ಲ. ಈ ಮೂಲಕ ಎಂದಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸಮಸ್ಯೆಗಳಿದ್ದರೆ ಅವುಗಳನ್ನು ಆಲಿಸಿ. ಅವರು ನಮ್ಮ ಮಕ್ಕಳು' ಎಂದು ಹೇಳಿದರು.

'ಮಗುವೊಂದು ತಂದೆಯ ಬಳಿ ಬಂದು, ನನಗೆ ಆ ವಸ್ತುವನ್ನು ಕೊಡಿಸುವುದಾಗಿ ಮಾತುಕೊಟ್ಟಿದ್ದೀರಿ ಎಂದು ದೂರಿಕೊಂಡಾಗ, ತಂದೆಯು ಆ ಮಾತನ್ನು ತಾನೇಕೆ ಈಡೇರಿಸಲು ಸಾಧ್ಯವಾಗಲಿಲ್ಲ ಎನ್ನುವುದನ್ನು ವಿವರಿಸಿ, ಅದನ್ನು ಶೀಘ್ರದಲ್ಲೇ ಮಾಡಿಕೊಡುವುದಾಗಿ ಭರವಸೆ ನೀಡುತ್ತಾನೆ. ಮಗುವನ್ನು ಅಲ್ಲಿಂದ ಓಡಿಸುವುದಿಲ್ಲ. ಅದೇ ರೀತಿ ವಿದ್ಯಾರ್ಥಿಗಳು ನಮ್ಮ ಮಕ್ಕಳು ಮತ್ತು ಅವರೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸಬೇಕು' ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಕುರಿತ ಪ್ರಶ್ನೆಗೆ, 'ಅದಿನ್ನೂ ಅನುಷ್ಠಾನಗೊಳ್ಳುತ್ತಿದೆ, ಈ ಹಂತದಲ್ಲಿ ನಾವೇನು ಹೇಳಲು ಸಾಧ್ಯ? ಇದು ಆರಂಭವಷ್ಟೇ, ಫಲಿತಾಂಶ ಏನು ಎನ್ನುವುದು ನಮಗೆ ನಂತರ ತಿಳಿಯಲಿದೆ 'ಎಂದು ಅವರು ಉತ್ತರಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿ, ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ದಾರಿ ಮಾಡಿಕೊಟ್ಟ ಸಂದರ್ಭದಲ್ಲೂ ಜೋಶಿ ಇದೇ ರೀತಿಯ ಕಳಕಳಿಯನ್ನು ವ್ಯಕ್ತಪಡಿಸಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries