ಕುಂಬಳೆ: ಮಹಿಳಾ ಕವಿ, ಲೇಖಕಿಯರ ಸಂಘಟನೆಯಾದ ಮನಸ್ವಿನಿ ಮಹಿಳಾ ವೇದಿಕೆಯ ಮನೆ-ಮನೆ ಅಭಿಯಾನದ ಈ ತಿಂಗಳ ಕಾರ್ಯಕ್ರಮ ಇಂದು(ಅ.4) ಅಪರಾಹ್ನ 2 ರಿಂದ ನಾರಾಯಣಮಂಗಲ ಶ್ರೀನಿಧಿ ನಿಲಯದಲ್ಲಿ ನಡೆಯಲಿದೆ.
ಸಮಾರಂಭವನ್ನು ಹಿರಿಯ ಶಿಕ್ಷಣ ತಜ್ಞ, ಸಾಹಿತಿ ವಿ.ಬಿ.ಕುಳಮರ್ವ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ದೀಪ ಬೆಳಗಿಸಿ ಉದ್ಘಾಟಿಸುವರು. ಕಾದಂಬರಿಕಾರೆ ಪ್ರಸನ್ನ ವಿ.ಚೆಕ್ಕೆಮನೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ಪ್ರಾಧ್ಯಾಪಕಿ ಡಾ.ಪರಿಣಿತ ರವಿ ಕೊಚ್ಚಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಥಾಗೋಷ್ಠಿಯಲ್ಲಿ ಪ್ರಸನ್ನಾ ವಿ.ಚೆಕ್ಕೆಮನೆ, ಸತ್ಯವತಿ ಭಟ್ ಕೊಳಚ್ಚಪ್ಪು, ಪಾರ್ವತಿ ಕುಳಕೋಡ್ಲು, ಸೀತಾಲಕ್ಷ್ಮೀ ವರ್ಮ ವಿಟ್ಲ, ಧನ್ಯಶ್ರೀ ಸರಳಿ, ಸುಮಿತ್ರ ಎರ್ಪಕಟ್ಟೆ, ಸರ್ವಮಂಗಳಾ ಪುಣಿಚಿತ್ತಾಯ, ಅನುಪಮಾ ರಾಘವೇಂದ್ರ ಉಡುಪಮೂಲೆ ಭಾಗವಹಿಸುವರು. ಸುಶೀಲಾ ಪದ್ಯಾಣ, ಲಕ್ಷ್ಮೀ ವಿ.ಭಟ್, ಜ್ಯೋಸ್ನ್ಸಾ ಎಂ.ಕಡಂದೇಲು, ಪ್ರಮೀಳಾ ಚುಳ್ಳಿಕ್ಕಾನ ಮೊದಲಾದವರು ನೇತೃತ್ವ ವಹಿಸುವರು.


