ವಯನಾಡ್: ಶುಕ್ರವಾರ ನಿಧನರಾದ ಅತ್ತಿಮಲ ಕಟ್ಟುನಾಯಕ ಕಾಲೋನಿಯ ದಾಮೋದರನ್ (75) ಅವರ ಮೃತದೇಹದ ಅಂತಿಮ ದರ್ಶನಕ್ಕೆ ಪುತ್ರಿ ಜಿಷಾಳನ್ನು ಭಾರೀ ಪೋಲೀಸ್ ಭದ್ರತೆಯಲ್ಲಿ ಕರೆತರಲಾಯಿತು.
ಮಾವೋವಾದಿ ಪ್ರಕರಣದಲ್ಲಿ ವಿಯ್ಯೂರು ಮಹಿಳಾ ಜೈಲಿನಲ್ಲಿರುವ ಜಿಷಾಳನ್ನು ಕೊಚ್ಚಿಯ ಎನ್‍ಐಎ ನ್ಯಾಯಾಲಯದ ಅನುಮತಿಯೊಂದಿಗೆ ಮಕ್ಕಿಮಲದಲ್ಲಿರುವ ಅವರ ಮನೆಗೆ ಕರೆತರಲಾಯಿತು.
ಶುಕ್ರವಾರ ರಾತ್ರಿ 8:30 ಕ್ಕೆ ಜಿಷಾಳನ್ನು ಮನೆಗೆ ಕರೆತರಲಾಯಿತು. ಒಂದೂವರೆ ಗಂಟೆಯ ನಂತರ ಅವರನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಯಿತು. ಈ ಮಧ್ಯೆ, ಶನಿವಾರ ರಾತ್ರಿ 10 ಗಂಟೆಯವರೆಗೆ ನ್ಯಾಯಾಲಯವು ಜಿಷಾಳನ್ನು ಜೈಲಿಗೆ ಮರಳಿ ಕರೆತರಲು ಸಮಯ ನೀಡಿದ್ದರೂ ಪೋಲೀಸರು ರಾತ್ರಿಯಿಡೀ ಮನೆಯಲ್ಲಿರಲು ಅವಕಾಶ ನೀಡಲಿಲ್ಲ ಎಂದು ಆಕೆಯ ಸಂಬಂಧಿಕರು ಆರೋಪಿಸಿದರು.
ಜಿಷಾ ಮಾವೋವಾದಿ ಕಬಾನಿ, ಭವಾನಿ ದಳ ಮತ್ತು ವೀರಗೌಡ ಸಂಘದಲ್ಲಿ ಕೆಲಸ ಮಾಡಿದ್ದಾರೆ. ಅವರು 2014 ರಲ್ಲಿ 24 ನೇ ವಯಸ್ಸಿನಲ್ಲಿ ಮಾವೋವಾದಿ ಸಂಘಟನೆಗೆ ಸೇರಿದರು. ಜಿಷಾ ಮೇಲೆ ಕೇರಳದಲ್ಲಿ ಸುಮಾರು 18 ಪ್ರಕರಣಗಳಿವೆ. ಜನವರಿ 8, 2025 ರಂದು ಬೆಂಗಳೂರಿನಲ್ಲಿ ಜಿಶಾ ಮತ್ತು ಇತರ ಆರು ಮಾವೋವಾದಿಗಳು ಪೆÇಲೀಸರಿಗೆ ಶರಣಾಗಿದ್ದರು.



