ಮಂಜೇಶ್ವರ: ಶಾಂತಿ ಸೇನಾ ಫೌಂಡೇಶನ್(ರಿ) ಮಂಜೇಶ್ವರ ಹಾಗೂ ಗಾಂಧಿ ದರ್ಶನ ಸಮಿತಿ ಮಂಜೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಪ್ರಯುಕ್ತ ಪುಷ್ಪಾರ್ಚನೆ, ಭಜನಾ ಕಾರ್ಯಕ್ರಮ ಹಾಗೂ ಗಾಂಧಿ ವಿಚಾರಸಂಕಿರಣ ಕಾರ್ಯಕ್ರಮ ವರ್ಕಾಡಿಯ ಎ.ಎಚ್. ಪ್ಯಾಲೇಸ್ ನಲ್ಲಿ ಶುಕ್ರವಾರ ನಡೆಯಿತು.
ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗಾಂಧೀಜಿಯವರ ತ್ಯಾಗ ಹಾಗೂ ಆದರ್ಶಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗಾಂಧಿ ದರ್ಶನ ಸಮಿತಿಯ ಅಧ್ಯಕ್ಷ ಹಾಗೂ ಪೈವಳಿಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಘವೇಂದ್ರ ಭಟ್ ಟಿ. ವಹಿಸಿ ಮಾತನಾಡಿ, ಗಾಂಧಿ ಕೇವಲ ವ್ಯಕ್ತಿಯಾಗಿದರೆ ಜಾಗತಿಕ ಶಕ್ತಿಯಾಗಿದ್ದವರು. ಅವರ ಮಾರ್ಗದರ್ಶನಗಳು ಎಲ್ಲಾ ಕ್ಷೇತ್ರಗಳಲ್ಲೂ ಇಂದಿಗೂ ಪ್ರಸ್ತುತ. ರಾಷ್ಟ್ರವನ್ನು ಒಗ್ಗೂಡಿಸಿ ಪರಕೀಯರ ಆಡಳಿತದಿಂದ ಮುಕ್ತಗೊಳಿಸಿದವರು. ಗಾಂಧಿ ತತ್ವವೇ ನಿಜವಾದ ರಾಷ್ಟ್ರ ಧರ್ಮ ಎಂದವರು ತಿಳಿಸಿದರು.
ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಉಳ್ಳಾಲದ ಮದನಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಟಿ. ಮಾತನಾಡಿ, ಆಧುನಿಕ ಸಮಾಜದ ಸಂಘರ್ಷ ಮತ್ತು ಸವಾಲುಗಳಿಗೆ ಗಾಂಧಿವಾದವೇ ಶಾಶ್ವತ ಪರಿಹಾರ. ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಪವಿತ್ರತೆಯ ತತ್ತ್ವಗಳು ಇಂದಿಗೂ ಸಾರ್ವಕಾಲಿಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಉಮ್ಮರ್ ಬೋರ್ಕಳ, ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಕಮಲಾಕ್ಷಿ ಕೆ., ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಉಷಾ ಪೂಂಜ, ವರ್ಕಾಡಿ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಚ್. ಎ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೌಮ್ಯ ಕೆ. ಕಳಿಯೂರು, ವಸಂತಿ ಶ್ರೀಧರ್, ಪಂ.ಸದಸ್ಯರಾದ ಗಾಯತ್ರಿ ಬೋರ್ಕಳ, ಲೀನಾ ಟೆಲ್ಲಿಸ್, ನಾರಾಯಣ, ಅಬ್ದುಲ್ ಖಾದರ್ ಹಾಜಿ, ಕೃಷ್ಣವೇಣಿ ಟೀಚರ್, ಕಂಚಿಲ ಮೊಹಮ್ಮದ್, ಶಾಂತಾ ಆರ್. ನಾಯ್ಕ್, ಅಬ್ದುಲ್ ಮಜೀದ್ ಬಿ. ಎ. ಹಾಗೂ ಲತೀಫ್ ಯೂನಿವರ್ಸಲ್ ಸಹಿತ ಪ್ರಮುಖರು ಗೌರವ ಉಪಸ್ಥಿತರಿದ್ದರು.
ಕೇರಳ ಶಾಂತಿ ಸೇನಾ ಫೌಂಡೇಶನ್‍ನ ಸಂಚಾಲಕ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮೀಂಜ ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಮಾಸ್ತರ್ ಕೆ. ವಂದಿಸಿದರು. ಗಾಯಕಿ, ವಿದುಷಿ ಸಹನಾ ಶೆಟ್ಟಿ ಬಾಕ್ರಬೈಲು ಅವರಿಂದ ಭಜನೆ ಹಾಗೂ ರಾಷ್ಟ್ರಗೀತೆಗಳ ಗಾಯನ ನಡೆಯಿತು. ಶಿಕ್ಷಕಿ ರೀಟಾ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
