HEALTH TIPS

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಮಟ್ಟಕ್ಕೇರಿಸಿ ಜಾಗತಿಕ ವೇದಿಕೆಯಲ್ಲಿ ಪ್ರಬಲ ಶಕ್ತಿಯನ್ನಾಗಿ ರೂಪಿಸಿದ್ದರೂ, ಅವರನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ಬಿಯಾದ ಮಾಜಿ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರು ಪ್ರತಿಪಾದಿಸಿದ್ದಾರೆ.


ಪ್ರಧಾನಿ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ, ಪಾಡ್‌ಕ್ಯಾಸ್ಟ್ ಒಂದರಲ್ಲಿ ಅಲೆಕ್ಸಾಂಡರ್ ವುಸಿಕ್ ನೀಡಿರುವ ಹೇಳಿಕೆ ಬುಧವಾರ ವೈರಲ್ ಆಗಿದೆ.

ಕಳೆದ ತಿಂಗಳು ಸರ್ಬಿಯಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ವುಸಿಕ್, ಜಾಗತಿಕವಾಗಿ ನಾಯಕರನ್ನು ಕುಗ್ಗಿಸುವ ಪ್ರಯತ್ನಗಳ ಪ್ರವೃತ್ತಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ವೇಳೆ ಪ್ರಧಾನಿ ಮೋದಿ ಅವರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ ವುಸಿಕ್, ಅವರು(ಮೋದಿ) ಭಾರತವನ್ನು ಪ್ರಮುಖ ಜಾಗತಿಕ ಶಕ್ತಿಯಾಗಿ ಪರಿವರ್ತಿಸಿದ್ದಾರೆ ಮತ್ತು "ದೊಡ್ಡ ಸಾಧನೆಗಳನ್ನು" ಮಾಡಿದ್ದಾರೆ ಎಂದು ಹೇಳಿದರು.

'ಪ್ರಧಾನಿ ಮೋದಿಯ ವರ್ಚಸ್ಸು ಕುಗ್ಗಿಸುವ ಯತ್ನ'

"ನಿಮ್ಮಲ್ಲಿ ನರೇಂದ್ರ ಮೋದಿಯವರಂತಹ ನಾಯಕರಿದ್ದಾರೆ. ಆದರೆ ಈಗ ಅವರನ್ನು ದುರ್ಬಲಗೊಳಿಸುವ ಅಥವಾ ಅವರ ವರ್ಚಸ್ಸನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಪ್ರಧಾನಿ ಮೋದಿ ಭಾರತವನ್ನು ಅತ್ಯುನ್ನತ ಮಟ್ಟಕ್ಕೇರಿಸಿದ್ದಾರೆ. ಅವರು ಮಹಾತ್ಮ ಗಾಂಧಿಯವರ ತತ್ವಗಳನ್ನು ಪಾಲಿಸಲು ಪ್ರಯತ್ನಿಸುತ್ತಾರೆ," ಎಂದು ವುಸಿಕ್ ಹೇಳಿದರು.

"ಅವರಿಂದಲೇ ಭಾರತವು ವಿಶ್ವ ವೇದಿಕೆಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಅವರು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ; ಆದರೂ, ಅವರು ವಿಫಲರಾಗಿದ್ದಾರೆ ಅಥವಾ ಇನ್ನೇನೋ ಮಾಡಿದ್ದಾರೆ ಎಂದು ಆರೋಪಿಸುವ ಮೂಲಕ ಅವರನ್ನು ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ. ಇದೊಂದು ರೀತಿಯ ವಾಡಿಕೆಯಾಗಿಬಿಟ್ಟಿದೆ" ಎಂದು ವುಸಿಕೆ ಹೇಳಿದ್ದಾರೆ. ಆದರೆ, ಮೋದಿ ಅವರನ್ನು "ಕೆಳಗಿಳಿಸುವ" ಪ್ರಯತ್ನಗಳ ಹಿಂದೆ ಯಾರಿದ್ದಾರೆ ಅಥವಾ ಪ್ರಧಾನಿ ಮೋದಿ ಅವರನ್ನು ಹೇಗೆ ದುರ್ಬಲಗೊಳಿಸಲಾಗುತ್ತಿದೆ ಎಂಬ ಬಗ್ಗೆ ವುಸಿಕ್ ಹೆಚ್ಚಿನ ವಿವರಗಳನ್ನು ನೀಡಿಲ್ಲ.


“𝐏𝐌 𝐌𝐨𝐝𝐢 𝐡𝐚𝐬 𝐫𝐚𝐢𝐬𝐞𝐝 𝐈𝐧𝐝𝐢𝐚 𝐭𝐨 𝐭𝐡𝐞 𝐡𝐞𝐚𝐯𝐞𝐧𝐬. 𝐓𝐨𝐝𝐚𝐲, 𝐈𝐧𝐝𝐢𝐚 𝐢𝐬 𝐢𝐦𝐩𝐨𝐫𝐭𝐚𝐧𝐭 𝐨𝐧 𝐭𝐡𝐞 𝐠𝐥𝐨𝐛𝐚𝐥 𝐬𝐭𝐚𝐠𝐞 𝐛𝐞𝐜𝐚𝐮𝐬𝐞 𝐨𝐟 𝐏𝐌 𝐌𝐨𝐝𝐢. 𝐇𝐞 𝐡𝐚𝐬 𝐝𝐨𝐧𝐞 𝐚 𝐭𝐫𝐞𝐦𝐞𝐧𝐝𝐨𝐮𝐬 𝐣𝐨𝐛.” - President of Serbia When world Show more




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries