HEALTH TIPS

ಸ್ಥಳೀಯ ಸಂಸ್ಥೆ ಚುನಾವಣೆ: YSRCP ನಾಯಕಿ ವಿಡದಲ ರಜಿನಿ ತಳ್ಳಿದ ಮಹಿಳಾ ಎಸ್‌ಐ

ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಸಚಿವೆ ಹಾಗೂ ವೈಎಸ್‌ಆರ್‌ಸಿಪಿ ನಾಯಕಿ ವಿಡದಲ ರಜಿನಿ ಅವರನ್ನು ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌(ಎಸ್‌ಐ) ಒಬ್ಬರು ನೆಲಕ್ಕೆ ತಳ್ಳಿದ್ದಾರೆ ಎನ್ನಲಾದ ಘಟನೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹೊತ್ತಿನಲ್ಲಿ ವಿವಾದಕ್ಕೆ ಕಾರಣವಾಗಿದೆ. 


ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ವರ್ತನೆಯನ್ನು ವೈಎಸ್‌ಆರ್‌ಸಿಪಿ ತೀವ್ರವಾಗಿ ಖಂಡಿಸಿದೆ.

ಝಡ್‌ಪಿಟಿಸಿ ಅಭ್ಯರ್ಥಿ ಹಾಗೂ ದಲಿತ ನಾಯಕ ಪಂಡುಲ ಬುಲ್ಲಬ್ಬಾಯಿ ಅವರು ರಜಿನಿ ಅವರನ್ನು ಭೇಟಿಯಾಗಲು ಬಂದಾಗ, ಪೊಲೀಸರು ಮನೆಯ ಗೇಟ್‌ನಲ್ಲೇ ಅವರನ್ನು ತಡೆದಿದ್ದಾರೆ. ನಮ್ಮ ಅಭ್ಯರ್ಥಿಯನ್ನು ನಿವಾಸದೊಳಗೆ ಪ್ರವೇಶಿಸಲು ಏಕೆ ಬಿಡುತ್ತಿಲ್ಲ ಎಂದು ರಜಿನಿ ಪ್ರಶ್ನಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ.

'ಹಿಂದುಳಿದ ವರ್ಗಗಳ ಮಹಿಳಾ ನಾಯಕಿ ಹಾಗೂ ಮಾಜಿ ಸಚಿವೆ ವಿಡದಲ ರಜಿನಿ ಅವರೊಂದಿಗೆ ಚಿಲಕಲೂರಿಪೇಟೆಯಲ್ಲಿರುವ ಅವರ ಸ್ವಂತ ನಿವಾಸದಲ್ಲೇ ಪೊಲೀಸರು ಆಘಾತಕಾರಿ ರೀತಿಯಲ್ಲಿ ವರ್ತಿಸಿದ್ದಾರೆ. ಚಿಲಕಲೂರಿಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಎಸ್‌ಐ ಪ್ರಿಯಾಂಕಾ ಅವರು ರಜನಿ ಅವರನ್ನು ಬಲವಂತವಾಗಿ ನೆಲಕ್ಕೆ ತಳ್ಳಿದ್ದಾರೆ' ಎಂದು ವೈಎಸ್‌ಆರ್‌ಸಿಪಿ ತನ್ನ ಎಕ್ಸ್‌ ಬರೆದುಕೊಂಡಿದೆ.

ಎಂಪಿಟಿಸಿ ಮತ್ತು ಝಡ್‌ಪಿಟಿಸಿ ಅಭ್ಯರ್ಥಿಗಳಿಗೆ ಬಿ-ಫಾರ್ಮ್‌ಗಳನ್ನು ವಿತರಿಸಲು ರಜಿನಿ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಗೃಹಬಂಧನದಲ್ಲಿಟ್ಟಿದ್ದರು ಎಂದು ಪಕ್ಷ ದೂರಿದೆ.

ಪೊಲೀಸರು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ವೈಎಸ್‌ಆರ್‌ಸಿಪಿ, ಈ ಸಂಬಂಧ ದೂರು ಸಲ್ಲಿಸಿರುವುದಾಗಿಯೂ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ನಾಮಪತ್ರಗಳನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ವೈಎಸ್‌ಆರ್‌ಸಿಪಿಯ ಆರೋಪಗಳ ನಡುವೆಯೇ ಈ ಘಟನೆ ನಡೆದಿದೆ.


Former Minister and BC woman leader Vidadala Rajini was subjected to shocking police treatment at her own residence in Chilakaluripet. Chilakaluripet Rural SI Priyanka has forcefully pushed her to the ground and attempted to push her towards a sharp-edged stone. Vidadala Show more

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries