HEALTH TIPS

ಒಡಿಶಾದಿಂದ ಉತ್ತರಪ್ರದೇಶಕ್ಕೆ 6 ತಿಂಗಳು ಪ್ರಯಾಣಿಸಿದ ಬೃಹತ್‌ ಯಂತ್ರ ಹೊತ್ತ ಟ್ರಕ್

ಲಖನೌ: 308 ಚಕ್ರಗಳ 'ಬಾಹುಬಲಿ ಟ್ರಕ್‌', ಅದರ ಮೇಲೆ 200 ಟನ್‌ ತೂಕದ ಯಂತ್ರ, ಆರು ತಿಂಗಳ ಸುದೀರ್ಘ ಪ್ರಯಾಣ, ಹಲವಾರು ಅಡೆತಡೆಗಳು, ಸವಾಲುಗಳು...


ಬೆಲ್ಜಿಯಂನಿಂದ ತರಲಾದ ಯಂತ್ರವೊಂದು ಒಡಿಶಾ, ಜಾರ್ಖಂಡ್‌ ಮತ್ತು ಬಿಹಾರದ ಮೂಲಕ ಉತ್ತರಪ್ರದೇಶಕ್ಕೆ ತಲುಪಿದ ಕಥೆ ಇದು. 

ಲಖೀಂಪುರ-ಖೀರಿ ಜಿಲ್ಲೆಯ ಕುಂಬಿಯಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ ಪಾಲಿಲ್ಯಾಕ್ಟಿಕ್‌ ಆಮ್ಲ ಆಧರಿತ ಬಯೋಪ್ಲಾಸ್ಟಿಕ್ ಉತ್ಪಾದನಾ ಘಟಕದ ಸಕ್ಕರೆ ಗಿರಣಿಗಾಗಿ ಬೃಹತ್‌ ಗಾತ್ರದ ವ್ಯಾಕ್ಯೂಮ್ ಬಾಯ್ಲರ್ ಅನ್ನು ತರಿಸಲಾಗಿದೆ. ಬೆಲ್ಜಿಯಂನಿಂದ ಕುಂಬಿವರೆಗಿನ ಈ ಯಂತ್ರದ ಪಯಣವು ರೋಚಕವಾಗಿತ್ತು.

ಯಂತ್ರವು ಬೆಲ್ಜಿಯಂನಿಂದ ಸಮುದ್ರ ಮಾರ್ಗವಾಗಿ ಮೇ ತಿಂಗಳಲ್ಲಿ ಒಡಿಶಾದ ಪಾರಾದೀಪ್ ಬಂದರಿಗೆ ತಲುಪಿತ್ತು. ಆದರೆ, ಅಲ್ಲಿಂದ ಉತ್ತರಪ್ರದೇಶಕ್ಕೆ ರಸ್ತೆ ಮೂಲಕ ಕೊಂಡೊಯ್ಯುವುದು ಸವಲಾಗಿತ್ತು. ಇದಕ್ಕಾಗಿ ವಿಶೇಷ ಹೈಡ್ರಾಲಿಕ್ ಟ್ರಕ್‌ ಅನ್ನು ಬಳಸಲಾಯಿತು. ಸುಮಾರು ಆರು ತಿಂಗಳ ಪ್ರಯಾಣದ ಬಳಿಕ ಅಕ್ಟೋಬರ್ 20ರಂದು ಈ ಯಂತ್ರವು ಲಖೀಂಪುರ-ಖೇರಿಗೆ ತಲುಪಿತು.

'ಮಹಾಟ್ರಕ್‌' ಎಂದು ಹೆಸರಾಗಿರುವ ಈ ಟ್ರಕ್‌ ವೇಗವಾಗಿ ಚಲಿಸುವಂತಿರಲಿಲ್ಲ. ಗಂಟೆಗೆ ಕೇವಲ ನಾಲ್ಕರಿಂದ ಐದು ಕಿಲೋ ಮೀಟರ್‌ ಮಾತ್ರ ಚಲಿಸುವ ಮೂಲಕ ದಿನಕ್ಕೆ 10ರಿಂದ 20 ಕಿ.ಮೀ ಕ್ರಮಿಸುತ್ತಿತ್ತು.

ಬೃಹತ್‌ ಗಾತ್ರದ ಯಂತ್ರ ಮತ್ತು ಟ್ರಕ್‌ ಅನ್ನು ನೋಡಿ ಬೆರಗಾದ ಜನರು ಚಿತ್ರ ಮತ್ತು ವಿಡಿಯೊಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸವಾಲಿನ ಪ್ರಯಾಣ

* ಬೃಹತ್‌ ಗಾತ್ರದ ಟ್ರಕ್ ಕಿರಿದಾದ ರಸ್ತೆಗಳು, ತಿರುವುಗಳು, ಸೇತುವೆಗಳು, ವಿದ್ಯುತ್ ಕಂಬಗಳನ್ನು ದಾಟುವುದು ಕಷ್ಟಕರವಾಗಿತ್ತು. ಹೀಗಾಗಿ, ಹಲವು ಇಲಾಖೆಗಳ ತಜ್ಞರ ಸಲಹೆ ಪಡೆಯಲಾಯಿತು.

* ವಾರಾಣಸಿ ಜಿಲೆಯಲ್ಲಿ ಪಾದಚಾರಿ ಸೇತುವೆಯೊಂದನ್ನು ತೆರವುಗೊಳಿಸಲಾಯಿತು. ಟ್ರಕ್‌ನ ಚಕ್ರಗಳ ಸಂಖ್ಯೆಯನ್ನು 308ರಿಂದ 240ಕ್ಕೆ ಇಳಿಸಲಾಯಿತು.

* ರಸ್ತೆಯುದ್ದಕ್ಕೂ ಹಲವು ಫಲಕಗಳು ಮತ್ತು ಕಮಾನುಗಳನ್ನು ತೆಗೆಯಬೇಕಾಯಿತು

* ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಿಳಿದು ಜನರು ಮುಗಿಬೀಳುತ್ತಿದ್ದುದರಿಂದ ಪೊಲೀಸರ ನೆರವು ಪಡೆಯಬೇಕಾಯಿತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries