HEALTH TIPS

65ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಂಪನ್ನ: ಕಲೆ-ಸಂಸ್ಕೃತಿ ಮಾನವೀಯತೆಯ ಕೊಂಡಿ — ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್


ಪೆರಡಾಲ ನವಜೀವನ ಶಾಲೆಯಲ್ಲಿ ಕಲೋತ್ಸವದ ಅದ್ಧೂರಿ ಸಮಾರೋಪ

ಬದಿಯಡ್ಕ: ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಸಮಾಜದಲ್ಲಿ ಸೌಹಾರ್ದತೆಯ ಬೀಜ ಬಿತ್ತಿ ಮಾನವರನ್ನು ಪರಸ್ಪರ ಬೆಸೆಯುವ ಪ್ರಬಲ ಕೊಂಡಿಗಳಾಗಿವೆ ಎಂದು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಭಿಪ್ರಾಯಪಟ್ಟರು.

ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ 65ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರ ಸರ್ವತೋಮುಖ ವಿಕಸನಕ್ಕೆ ಶಾಲಾ ಕಲೋತ್ಸವಗಳು ಭದ್ರ ಬುನಾದಿ ಒದಗಿಸುತ್ತವೆ. ಸ್ಪರ್ಧಾ ಕಣದಲ್ಲಿ ಸೋಲು-ಗೆಲುವು ಸಹಜ. ಅಂತಿಮ ಫಲಿತಾಂಶಕ್ಕಿಂತ ಮುಕ್ತವಾಗಿ ಪಾಲ್ಗೊಳ್ಳುವುದೇ ಮುಖ್ಯ. ಗೆದ್ದವರು ವಿನಮ್ರತೆಯನ್ನು ಮೈಗೂಡಿಸಿಕೊಳ್ಳಬೇಕು, ಸೋತವರು ಹತಾಶೆಗೆ ಒಳಗಾಗದೆ ಮುಂದಿನ ಸಾಧನೆಗೆ ದೃಢಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಬಹುಭಾಷೆ ಹಾಗೂ ಬಹುಸಂಸ್ಕೃತಿಯ ಗಡಿನಾಡು ಕಾಸರಗೋಡಿನಲ್ಲಿ ಇಂತಹ ಸಾಂಸ್ಕೃತಿಕ ಮಹೋತ್ಸವಗಳು ಸಹಬಾಳ್ವೆ ಮತ್ತು ಭಾವೈಕ್ಯತೆಯನ್ನು ಗಟ್ಟಿಗೊಳಿಸುತ್ತವೆ ಎಂದ ಸಂಸದರು, ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಿದ ಸಮಿತಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಅಕ್ಟೋಬರ್ 26 ಮತ್ತು 27 ರಂದು ವೇದಿಕೆಯೇತರ ಸ್ಪರ್ಧೆಗಳು ಹಾಗೂ ನವೆಂಬರ್ 2 ರಿಂದ 4 ರವರೆಗೆ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ವಿಜೃಂಭಣೆಯಿಂದ ಜರುಗಿದವು.

ಗಣ್ಯರ ಉಪಸ್ಥಿತಿ: ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಙಳ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಡಿ. ಶಂಕರ, ಚೆಂಗಳ ಗ್ರಾ.ಪಂ. ಅಧ್ಯಕ್ಷ ವಸಂತ ಅಜಕ್ಕೋಡು, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ, ಜಿ.ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಬ್ಲಾಕ್ ಪಂಚಾಯತ್ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾ.ಪಂ. ಸದಸ್ಯರಾದ ಮಾಹಿನ್ ಕೇಳೋಟ್, ಗಂಗಾಧರ ಗೋಳಿಯಡ್ಕ, ಅನ್ನತ್ ಬೀವಿ, ಶ್ಯಾಮಪ್ರಸಾದ ಸರಳಿ, ಹರೀಶ ಎ. ಹಾಗೂ ಅಶ್ವತಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ (AEO) ಅಶೋಕ ಎಂ., ಶಾಲಾ ಪ್ರಾಂಶುಪಾಲ ಶ್ರೀಕೃಷ್ಣ ಎಂ., ಆಡಳಿತ ಮಂಡಳಿ ಉಪಾಧ್ಯಕ್ಷ ನ್ಯಾಯವಾದಿ ನವೀನ್ ಬನಾರಿ, ನಿವೃತ್ತ ಎಇಒ ವೆಂಕಟ್ರಮಣ ಭಟ್, ಆಡಳಿತ ಮಂಡಳಿ ಸದಸ್ಯ ಕೃಷ್ಣಪ್ರಸಾದ ರೈ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಭಟ್ ಪೆರ್ಮುಖ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಪಿ. ಸಿಂಧು, ಮಾತೃಸಮಿತಿ ಅಧ್ಯಕ್ಷೆ ಅನ್ನತ್ ಬೀವಿ ಹಾಗೂ ಪ್ರಮುಖರಾದ ನಿರಂಜನ ರೈ ಪೆರಡಾಲ, ನರೇಂದ್ರ ಬಿ.ಎನ್., ಸುಧಾಕರನ್ ವಿದ್ಯಾಗಿರಿ, ಸುಧಾಕರನ್ ಮುಲ್ಲಚ್ಚೇರಿ, ಜಗನ್ನಾಥ ರೈ ಪೆರಡಾಲ, ಎಂ. ನಾರಾಯಣ, ಶಾಫಿ ಚೂರಿಪ್ಪಳ್ಳ ಮುಂತಾದವರು ಪಾಲ್ಗೊಂಡು ಶುಭ ಹಾರೈಸಿದರು.

ಮುಖ್ಯೋಪಾಧ್ಯಾಯಿನಿ ಶಾಹಿದಾ ಬೀವಿ ಕಲೋತ್ಸವದ ಸಮಗ್ರ ವರದಿ ವಾಚಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸ್ವಾಗತಿಸಿ, ಸಂಚಾಲಕ ಕೆ. ಪ್ರಭಾಕರನ್ ನಾಯರ್ ವಂದಿಸಿದರು. ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಹಾಗೂ ಪಾರ್ಕಿಂಗ್ ಸಮಿತಿ ಸಂಚಾಲಕ ಪ್ರಸಾದ್ ಮಾಸ್ತರ್ ಕೆ. ಕಾರ್ಯಕ್ರಮ ನಿರೂಪಿಸಿದರು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries