HEALTH TIPS

ಲಾಡ್ಜ್ ಕೊಠಡಿಗೆ ನುಗ್ಗಿ ಜೋಡಿಯ ಮೇಲೆ ಹಲ್ಲೆ, ದರೋಡೆ: ಅಪ್ರಾಪ್ತ ಸೇರಿದಂತೆ ಮೂವರ ಬಂಧನ

 ಕಾಸರಗೋಡು: ವಸತಿಗೃಹದ ಕೊಠಡಿಯಲ್ಲಿದ್ದ ಯುವಕ ಹಾಗೂ ಆತನ ಮಹಿಳಾ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ಹಾಗೂ ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಧೂರು ಎಸ್.ಪಿ. ನಗರದ ಕ್ವಾರ್ಟರ್ಸ್ ನಿವಾಸಿ, ಹಲವು ಪ್ರಕರಣಗಳ ಆರೋಪಿ ಸಾಬಿತ್ (30), ನಾಯಮ್ಮಾರಮೂಲೆ ಅಕ್ಕರಪಳ್ಳಿ ನಿವಾಸಿ ಅಮೀರ್ ಅಲಿ (30) ಹಾಗೂ 17 ವರ್ಷದ ಬಾಲಕ ಬಂಧಿತ ಆರೋಪಿಗಳು. ಪನತ್ತಡಿ ಕೊಳಿಚಾಲ್ ನಿವಾಸಿ 22 ವರ್ಷದ ಯುವಕ ಮತ್ತು ಆತನ ಮಹಿಳಾ ಸ್ನೇಹಿತೆ ದರೋಡೆಗೊಳಗಾದವರು.

ಬುಧವಾರ ಸಂಜೆ 4:30 ರಿಂದ ರಾತ್ರಿ 8 ಗಂಟೆಯ ನಡುವಿನ ಅವಧಿಯಲ್ಲಿ ನಗರದ ಹೊಸ ಬಸ್ ನಿಲ್ದಾಣ ಸಮೀಪದ ವಸತಿಗೃಹವೊಂದರಲ್ಲಿ ಈ ಘಟನೆ ನಡೆದಿದೆ. ಲಾಡ್ಜ್ ಕೊಠಡಿಯಲ್ಲಿದ್ದ ಜೋಡಿಯ ಬಳಿಗೆ ಅಕ್ರಮವಾಗಿ ನುಗ್ಗಿದ ದುಷ್ಕರ್ಮಿಗಳು, ಯುವಕನ ಮುಖಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಯುವತಿಯ ಒಂದು ಜೊತೆ ಕಿವಿಯೋಲೆ ಹಾಗೂ ಯುವಕನ ಎಟಿಎಂ ಕಾರ್ಡ್ ಕಸಿದುಕೊಂಡಿದ್ದು, ಎಟಿಎಂ ಮುಖಾಂತರ ₹10,000 ನಗದು ಎಗರಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries