ಅಯೋಧ್ಯೆ: ಭಾರತ ಹಾಗೂ ಉತ್ತರ ಪ್ರದೇಶದ ಪ್ರಗತಿಗೆ ರಾಮಜನ್ಮಭೂಮಿ ಚಳವಳಿಯೇ ಕಾರಣ. ರಾಮಭಕ್ತರ ತ್ಯಾಗ ಮತ್ತು ಬಲಿದಾನಗಳು ದೇಶದಲ್ಲಿ ಪರಿವರ್ತನೆಗೆ ನಾಂದಿ ಹಾಡಿವೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ತೀರದಲ್ಲಿ 10ನೇ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿರುವ ಅವರು, '500 ವರ್ಷಗಳಿಗೂ ಹೆಚ್ಚು ಕಾಲದ ಹೋರಾಟದ ಬಳಿಕ ರಾಮನ ಜನ್ಮಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು.
ಈ ಚಳವಳಿಯಲ್ಲಿ ಪಾಲ್ಗೊಂಡ ರಾಮಭಕ್ತರ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ' ಎಂದು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಅಸಂಖ್ಯಾತ ರಾಮಭಕ್ತರ, ಸಂತರ ಹಾಗೂ ಧಾರ್ಮಿಕ ಮುಖಂಡರ ತ್ಯಾಗ ಮತ್ತು ಸಮರ್ಪಣೆಯೇ ಮೂಲ ಕಾರಣ' ಎಂದಿದ್ದಾರೆ.
ಇಂದು, ರಾಮನ ಜನ್ಮಸ್ಥಳದಲ್ಲಿ ನಿಂತು ಈ ದೇವಾಲಯವನ್ನು ನೋಡುವುದು ಹೆಮ್ಮೆಯ ವಿಚಾರ. ಸಂತರು ,ಋಷಿಗಳ ತಪಸ್ಸು ಹಾಗೂ ದೇಶ ಮತ್ತು ವಿದೇಶಗಳ ಜನರ ಕೊಡುಗೆ ಅಪಾರ' ಎಂದು ಅವರು ಬಣ್ಣಿಸಿದ್ದಾರೆ.

