ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರಿ ಸರಕು ಸಾಗಣೆ, ವಿಶೇಷವಾಗಿ ಕಲ್ಲಿದ್ದಲು ಸಾಗಣೆಯು ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಮಾರ್ಗಗಳಲ್ಲಿ ಗರಿಷ್ಠ ಒತ್ತಡ ಸೃಷ್ಟಿಸಿದೆ.
ಪ್ರಸ್ತುತ ನಾವು ಏಳು ಪ್ರಮುಖ ಕಾರಿಡಾರ್‌ಗಳನ್ನು ನಾಲ್ಕು ಪಟ್ಟು ವಿಸ್ತರಿಸುತ್ತಿದ್ದೇವೆ. ಇಂತಹ ಯೋಜನೆಗಳಿಗೆ ಪ್ರಧಾನಿ ಅಗಾಗ್ಗೆ ಅನುಮೋದನೆ ನೀಡುತ್ತಾರೆ' ಎಂದು ಹೇಳಿದ್ದಾರೆ.
'ದೆಹಲಿ, ಕೋಲ್ಕತ್ತ, ಚೆನ್ನೈ ಮತ್ತು ಮುಂಬೈ ನಗರಗಳನ್ನು ಸಂಪರ್ಕಿಸುವ ಸುವರ್ಣ ಚತುಷ್ಕೋನ ರಾಷ್ಟ್ರೀಯ ಮಾರ್ಗಗಳನ್ನು ಹಾಗೂ ದೆಹಲಿ-ಚೆನ್ನೈ, ಮುಂಬೈ-ಕೋಲ್ಕತ್ತ ಮತ್ತು ದೆಹಲಿ-ಗುವಾಹಟಿಯನ್ನು ಸಂಪರ್ಕಿಸುವ ಕರ್ಣೀಯ ಕಾರಿಡಾರ್‌ಗಳನ್ನು ನಾಲ್ಕು ಪಥಗಳ ಮಾರ್ಗಗಳನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ' ಎಂದು ಅವರು ಹೇಳಿದ್ದಾರೆ.
'ಕಳೆದ ಒಂದು ದಶಕದಲ್ಲಿ 36,000 ಕಿ.ಮೀ. ಹೆಚ್ಚುವರಿ ಹಳಿಗಳನ್ನು ಹಾಕಲಾಗಿದೆ. ಹೊಸ ಹಳಿಗಳನ್ನು ನಿರ್ಮಿಸುವುದು ಮತ್ತು ಅದರ ಸಾಮರ್ಥ್ಯ ಹೆಚ್ಚಿಸುವುದೇ ಶಾಶ್ವತ ಪರಿಹಾರಕ್ಕಿರುವ ಏಕೈಕ ಮಾರ್ಗ' ಎಂದು ಅವರು ಪ್ರತಿಪಾದಿಸಿದ್ದಾರೆ.
ಅನಧಿಕೃತ ಆಯಪ್‌ಗಳ ವಿರುದ್ಧ ಕ್ರಮ ಆರಂಭ
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ಭಾರತೀಯ ರೈಲ್ವೆ ಜಾಲದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಇ-ಕೇಟರಿಂಗ್ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಆಯಪ್‌ಗಳನ್ನು ಗುರುತಿಸಿ ಅವನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲು ಆರಂಭಿಸಿದೆ.

