HEALTH TIPS

ಉದ್ಯೋಗದ ಆಮಿಷವೊಡ್ಡಿ ರಷ್ಯಾಕ್ಕೆ ಕರೆದೊಯ್ದು ಸೇನೆಗೆ ಸೇರಲು ಒತ್ತಡ; ಬಂಧನಕ್ಕೊಳಗಾದ ವ್ಯಕ್ತಿಯ ನೆರವಿಗಾಗಿ ಸರಕಾರಕ್ಕೆ ಕುಟುಂಬದ ಮೊರೆ

ರಾಯಪುರ: ರಷ್ಯಾದಲ್ಲಿ ಉದ್ಯೋಗದ ಕೊಡುಗೆಯನ್ನು ನಂಬಿ ಅಲ್ಲಿಗೆ ತೆರಳಿದ್ದ ರಾಯಪುರದ ವ್ಯಕ್ತಿಯೊಬ್ಬರು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಟಿಕೇಶ್ವರ್ ಸಾಹು (38) ಅವರಿಗೆ ಟೆಲಿಗ್ರಾಂ ಮೂಲಕ ರಷ್ಯಾದಲ್ಲಿ ಉದ್ಯೋಗದ ಆಫರ್ ಬಂದಿತ್ತು. ಕುಟುಂಬಕ್ಕೆ ಉತ್ತಮ ಭವಿಷ್ಯ ಕಲ್ಪಿಸುವ ಆಸೆಯಿಂದ ಅವರು ಸೆಪ್ಟೆಂಬರ್ ನಲ್ಲಿ ರಷ್ಯಾಕ್ಕೆ ತೆರಳಿದ್ದರು.

ಆದರೆ, ಅಲ್ಲಿ ಅವರಿಗೆ ಕಾದಿದ್ದು ದೊಡ್ಡ ಆಘಾತ.

ಮಾದಕ ವಸ್ತುಗಳಿಗೆ ಸಂಬಂಧಿಸಿದ ಸುಳ್ಳು ಆರೋಪದ ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ರಷ್ಯಾ ಸೇನೆಗೆ ಸೇರಲು ಒತ್ತಾಯಿಸಲಾಗುತ್ತಿದೆ ಎಂದು ಸಾಹು ಅವರ ಕುಟುಂಬ ಆರೋಪಿಸಿದೆ. ರಷ್ಯಾಕ್ಕೆ ತೆರಳಿದ ಕೆಲವೇ ದಿನಗಳಲ್ಲಿ, ತನ್ನನ್ನು ಜೈಲಿನಲ್ಲಿಡಲಾಗಿದೆ ಮತ್ತು ಮಿಲಿಟರಿ ಸೇವೆಗೆ ಬಲವಂತ ಮಾಡಲಾಗುತ್ತಿದೆ ಎಂದು ಸಾಹು ಕುಟುಂಬಕ್ಕೆ ತಿಳಿಸಿದ್ದರು.

ನ. 4ರಂದು ಅವರ ಪತ್ನಿ ಮನೋರಮಾ ಅವರು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಮತ್ತು ರಾಯಪುರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ತನ್ನ ಪತಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರಕಾರದ ನೆರವು ಕೋರಿದ್ದಾರೆ. ಸಾಹು ಅವರಿಗೆ ಡೆಲಿವರಿ ಏಜೆಂಟ್ ಕೆಲಸದ ಆಮಿಷವೊಡ್ಡಿ, ಪ್ರವಾಸಿ ವೀಸಾವನ್ನು ಕೆಲಸದ ವೀಸಾವಾಗಿ ಪರಿವರ್ತಿಸುವುದಾಗಿ ನಂಬಿಸಲಾಗಿತ್ತು.

ಕುಟುಂಬಸ್ಥರು ಸಾಹು ಅವರ ಬಿಡುಗಡೆಗಾಗಿ ರಷ್ಯಾದ ವಕೀಲರನ್ನು ನೇಮಿಸಿಕೊಂಡು ಸುಮಾರು 1.5 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸಾಹು ಅವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದು, ಜೈಲಿನಲ್ಲಿರುವಾಗ ಅವರಿಗೆ ಸರಿಯಾದ ಔಷಧಿ ಸಿಕ್ಕಿಲ್ಲ. ಅವರ ಮೇಲೆ ಹಲ್ಲೆಯೂ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಅಕ್ಟೋಬರ್ 22ರಂದು ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಾಹು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವಕೀಲರು ಕುಟುಂಬಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಸಾಹು ಕುಟುಂಬವು ಭಾರತ ಮತ್ತು ರಷ್ಯಾದ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿದ್ದು, ಪ್ರಧಾನಮಂತ್ರಿಯವರ ʼಕುಂದುಕೊರತೆ ಪೋರ್ಟಲ್ʼ ಮೂಲಕವೂ ದೂರು ದಾಖಲಿಸಿದೆ. ಭಾರತೀಯ ರಾಯಭಾರ ಕಚೇರಿಯು ಪ್ರಕರಣದ ವಿವರಗಳನ್ನು ಪರಿಶೀಲಿಸುತ್ತಿರುವುದಾಗಿ ಕುಟುಂಬಕ್ಕೆ ತಿಳಿಸಿದೆ. ರಾಯಪುರ ಪೊಲೀಸ್ ಇಲಾಖೆಯು ಈ ದೂರನ್ನು ರಾಜ್ಯ ಗೃಹ ಇಲಾಖೆಯ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದೆ.

ಕುಟುಂಬವು ಈಗ ಸಾಹು ಅವರ ಸುರಕ್ಷಿತ ವಾಪಸಾತಿಗಾಗಿ ಸರಕಾರದ ಮಧ್ಯಸ್ಥಿಕೆಯನ್ನು ಕಾತುರದಿಂದ ಎದುರು ನೋಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries