ಕಾಸರಗೋಡು: ವಿಶ್ವ ಮಧುಮೇಹ ದಿನದ ಅಂಗವಾಗಿ, ಕಾಸರಗೋಡು ವಿದ್ಯಾನಗರ ಲಯನ್ಸ್ ಕ್ಲಬ್, ಕಾಸರಗೋಡಿನ ಡಯಾ ಲೈಫ್ ಆಸ್ಪತ್ರೆ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಜಂಟಿ ಆಶ್ರಯದಲ್ಲಿ ಮಧುಮೇಹ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಕಾಸರಗೋಡು ಹೊಸ ಬಸ್ ನಿಲ್ದಾಣದ ಆವರಣದಿಂದ ಆರಂಭವಾದ ಈ ಜಾಗೃತಿ ಜಾಥಾವು ವಿದ್ಯಾನಗರದವರೆಗೆ ಸಾಗಿತು.
ಲಯನ್ಸ್ ಡಿಸ್ಟ್ರಿಕ್ಟ್ 318-ಇ ಗವರ್ನರ್ ಲಯನ್ ಟೈಟಸ್ ಥಾಮಸ್ ಜಾಥಾಕ್ಕೆ ಚಾಲನೆ ನೀಡಿದರು. ಡಯಾ ಲೈಫ್ ಆಸ್ಪತ್ರೆಯ ಡಾ. ಐ.ಕೆ. ಮುಹಮ್ಮದ್ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಡಿಸ್ಟ್ರಿಕ್ಟ್ ಕಾರ್ಯದರ್ಶಿ ಪಿ.ವಿ. ಮಧುಸೂದನನ್, ಜಿಲ್ಲಾ ಕಾನೂನು ಸಲಹೆಗಾರ ವಿನೋದ್ ಕುಮಾರ್, ವಲಯ ಅಧ್ಯಕ್ಷ ಎಂ.ಎ. ನಾಸರ್ ಮತ್ತು ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಕೆ. ವಿಜಯಕುಮಾರ್ ಸ್ವಾಗತಿಸಿದರು.
ವಿದ್ಯಾನಗರ ಹಾಗೂ ಸುತ್ತಮುತ್ತಲಿನ ಇತರ ಲಯನ್ಸ್ ಕ್ಲಬ್ ಸದಸ್ಯರು, ಕಾಸರಗೋಡು ಸರ್ಕಾರಿ ಕಾಲೇಜಿನ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು, ಚಿನ್ಮಯ ವಿದ್ಯಾಲಯ ಹಾಗೂ ವಿದ್ಯಾನಗರ ಐಟಿಐಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮತ್ತು ಮಲಿಕ್ ದೀನಾರ್ ಹಾಗೂ ಕೇರ್‌ವೆಲ್ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ ರಕ್ಷಣೆ ಹಾಗೂ ಮಧುಮೇಹ ತಡೆಗಟ್ಟುವಿಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

