ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಕಾಸರಗೋಡು ವೆಸ್ಟ್ ಯೂನಿಟ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಕಾಸರಗೋಡಿನ ಜಿಲ್ಲಾ ಕಚೇರಿ 'ಎ.ಕೆ.ಪಿ.ಎ. ಭವನ'ದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಸಾಧಾರಣ ಪ್ರತಿಭೆಯ ಮೂಲಕ ನಾಡಿಗೆ ಹೆಮ್ಮೆ ತಂದ ಪುಟ್ಟ ಬಾಲಕಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕೇವಲ ಎರಡು ವರ್ಷ ವಯಸ್ಸಿನಲ್ಲಿಯೇ ವಿಶೇಷ ಸಾಧನೆ ಮಾಡಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026'ಕ್ಕೆ ಪಾತ್ರರಾಗಿರುವ ಫಾತಿಮತ್ ಹಫಾ ಅಡ್ಕ ಮತ್ತು ನವಾಲ್ ರಹಮಾನ್ ದಂಪತಿಯ ಪುತ್ರಿ ನೈಹಾ ಸಫಿಯಾ ನವಾಲ್ ಅವರಿಗೆ ಎಕೆಪಿಎ ಕಾಸರಗೋಡು ಜಿಲ್ಲಾ ಜೊತೆ ಕಾರ್ಯದರ್ಶಿ ಮನು ಎಲ್ಲೋರ ಸ್ಮರಣಿಕೆ ನೀಡಿ ಗೌರವಿಸಿದರು.
ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎ.ಕೆ.ಪಿ.ಎ. ಕಾಸರಗೋಡು ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವೀಡಿಯೋನಿಕ್ಸ್, ಯೂನಿಟ್ ಪಿ.ಆರ್.ಒ ವಿನೋದ್, ಸಮಿತಿ ಸದಸ್ಯ ರತೀಶ್ ರಾಮು ಹಾಗೂ ನೈಹಾ ಸಫಿಯಾ ಅವರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಶಾಲಿನಿರಾಜ್ ಸ್ವಾಗತಿಸಿ, ಮನು ಎಲ್ಲೋರ ವಂದಿಸಿದರು.


