ಮಧೂರು: ಮಧೂರು ಸಮೀಪದ ಅರ್ಜುನಗುಳಿ ನಿವಾಸಿ, ಪ್ರಗತಿಪರ ಕೃಷಿಕ ಕೃಷ್ಣ ಮೂಲ್ಯ (75) ನಿಧನರಾದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಕೃಷಿ ವಿಭಾಗದ ನಿವೃತ್ತ ನೌಕರರಾಗಿದ್ದ ಇವರು, ಭತ್ತದ ಬೇಸಾಯ ಹಾಗೂ ತರಕಾರಿ ಕೃಷಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಕೃಷಿ ಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ಕೇರಳ ಸರ್ಕಾರದ ಕೃಷಿ ಇಲಾಖೆಯಿಂದ ಪ್ರಶಂಸಾಪತ್ರವನ್ನೂ ಪಡೆದಿದ್ದರು. ಅಲ್ಲದೆ, ಕುಂಜಾರು ಶ್ರೀ ಶಕ್ತಿಪುರ ದೈವಸ್ಥಾನದ ದೈವ ಕೋಲ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.


