ಕೊಲ್ಲಂ: ಕೊಲ್ಲಂ-ಶೆಂಗೊಟ್ಟೈ ರೈಲ್ವೆ ಮಾರ್ಗದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಆರ್ಯಂಕಾವು ಮತ್ತು ಭಗವತೀಪುರಂ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಾಲಕ್ಕಾಡ್ ಕಡೆಗೆ ತೆರಳುತ್ತಿದ್ದ ಪಾಲರುವಿ ಎಕ್ಸ್ಪ್ರೆಸ್ ರೈಲು ಹುಲಿಗೆ ಡಿಕ್ಕಿ ಹೊಡೆದಿದೆ.
ಅಪಘಾತ ಸಂಭವಿಸಿದ ತಕ್ಷಣವೇ ರೈಲನ್ನು ನಿಲ್ಲಿಸಿದ ಸಿಬ್ಬಂದಿ, ಕೂಡಲೇ ತಮಿಳುನಾಡು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ರೈಲ್ವೆ ಹಳಿಯ ಮೇಲಿದ್ದ ಹುಲಿಯ ಕಳೇಬರವನ್ನು ತೆರವುಗೊಳಿಸಿದ ನಂತರ ರೈಲು ಪ್ರಯಾಣವನ್ನು ಮುಂದುವರಿಸಿದೆ.


