HEALTH TIPS

ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಮೇಲೆ ನಿರ್ದೇಶಿಸುವ ಅಧಿಕಾರ ಇಲ್ಲ: 'ಸುಪ್ರೀಂ'

ನವದೆಹಲಿ: ಹೈಕೋರ್ಟ್‌ ಒಮ್ಮೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ, ಕೆಳ ನ್ಯಾಯಾಲಯಗಳು ಸಾಮಾನ್ಯ ಜಾಮೀನು ಅರ್ಜಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಯಾವುದೇ ನಿರ್ದೇಶನಗಳನ್ನು ನೀಡಲು ಅದಕ್ಕೆ ಅಧಿಕಾರವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 


ಇಂಥ ನಿರ್ದೇಶನಗಳು ಅಧೀನ ನ್ಯಾಯಾಲಯಗಳ ಸ್ವತಂತ್ರ ವಿವೇಚನಾಧಿಕಾರವನ್ನು ಕಾನೂನುಬಾಹಿರವಾಗಿ ಮೊಟಕುಗೊಳಿಸುತ್ತವೆ ಮತ್ತು ಇದು ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್‌ ಮತ್ತು ಸಂಜೀವ್ ಸಚ್‌ದೇವ ಅವರನ್ನು ಒಳಗೊಂಡ ನ್ಯಾಯಪೀಠವು, ಒಡಿಶಾದಲ್ಲಿ ಕ್ರಿಮಿನಲ್‌ ಪ್ರಕರಣದಲ್ಲಿ ಮೂವರು ಆರೋಪಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟ ಆದೇಶದ ವಿರುದ್ಧದ ದೂರುದಾರೆ ಲಕ್ಷ್ಮಿ ರೇ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.

ಒಡಿಶಾ ಹೈಕೋರ್ಟ್‌ 2025ರ ಆಗಸ್ಟ್‌ 5ರಂದು ನೀಡಿದ್ದ ಆದೇಶ ಮತ್ತು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು 2025ರ ಡಿಸೆಂಬರ್‌ 16ರಂದು ನೀಡಿದ್ದ ಸಾಮಾನ್ಯ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries