ಬದಿಯಡ್ಕ: ಕೇರಳ ದಸ್ತಾವೇಜು ಬರಹಗಾರರ ಸಂಘದ ಬದಿಯಡ್ಕ ಯೂನಿಟ್ ವಾರ್ಷಿಕ ಸಮ್ಮೇಳನವು ಬದಿಯಡ್ಕದಲ್ಲಿ ಯಶಸ್ವಿಯಾಗಿ ಜರುಗಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು ದೀಪ ಪ್ರಜ್ವಲಿಸಿ ಸಮ್ಮೇಳನವನ್ನು ಉದ್ಘಾಟಿಸಿದರು.
ಸ್ಥಳೀಯ ಜನಪ್ರತಿನಿಧಿಗಳಾದ ಶ್ಯಾಮಪ್ರಸಾದ್ ಸರಳಿ ಹಾಗೂ ಹರೀಶ್ ಅನ್ನೆಪ್ಪಲ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬದಿಯಡ್ಕ ಘಟಕದ ಅಧ್ಯಕ್ಷೆ ಜೋಳಿ ಮ್ಯಾಥ್ಯೂ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಘಟಕದ ವಾರ್ಷಿಕ ವರದಿ ಹಾಗೂ ಆಯವ್ಯಯ ಲೆಕ್ಕಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ:
ಜಿಲ್ಲಾ ಅಧ್ಯಕ್ಷರು ಹಾಗೂ ಸಂಘಟನೆಯ ವಿವಿಧ ಹಿರಿಯ ಮುಖಂಡರ ಸಮ್ಮುಖದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗಾಗಿ ಯೂನಿಟ್‌ನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಶ್ರೀಧರನ್ ನಾಯರ್
ಕಾರ್ಯದರ್ಶಿ: ಚಿತ್ರಲೇಖ
ಖಜಾಂಚಿ: ದಿನೇಶ ಕರಿಂಬಿಲ
ಕಾರ್ಯಕ್ರಮದಲ್ಲಿ ಕರಿಂಬಿಲ ಲಕ್ಷ್ಮಣ ಪ್ರಭು ಕಾರ್ಯಕ್ರಮ ನಿರೂಪಿಸಿದರು. ನೂತನ ಅಧ್ಯಕ್ಷ ಶ್ರೀಧರನ್ ನಾಯರ್ ಸ್ವಾಗತಿಸಿ, ಪ್ರಶಾಂತಿ ವಂದಿಸಿದರು.

.jpg)

