ಮಂಜೇಶ್ವರ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಧ್ರುವಿ ಶೇಕಡಾ 94 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಕದ್ರಿ ನೃತ್ಯಾಲಯ ಪದವಿನಂಗಡಿಯ ವಿದುಷಿ ನಿಶ್ಚಿತಾ ಶರಣ್ ಆರ್. ಕರಂದೂರು ಅವರ ಶಿಷ್ಯೆಯಾಗಿದ್ದು, ಯೆಯ್ಯಾಡಿಯ ಪುಷ್ಪರಾಜ್ ಮತ್ತು ಸುಮನ ದಂಪತಿಯ ಪುತ್ರಿಯಾಗಿದ್ದಾರೆ.


