HEALTH TIPS

ಎಕೆಪಿಎ ವೆಸ್ಟ್ ಯೂನಿಟ್ ವತಿಯಿಂದ ಕೇರಳ ರಾಜ್ಯೋತ್ಸವ ದಿನಾಚರಣೆ: ಹಿರಿಯ ಕಲಾವಿದ ಕುಲ್ಸು ಅಬ್ದುಲ್ಲಾ ಅವರಿಗೆ ಸನ್ಮಾನ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ಕೇರಳ ರಾಜ್ಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಕಲಾವಿದ ಕುಲ್ಸು ಅಬ್ದುಲ್ಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 1973ರಿಂದ ಕಾಸರಗೋಡಿನ ‘ಕುಲ್ಸು ಆರ್ಟ್ಸ್’ ಸಂಸ್ಥಾಪಕರಾಗಿ ರಂಗಭೂಮಿ, ನಾಟಕ ಹಾಗೂ ರಂಗಸಜ್ಜಿಕೆ (ಸ್ಟೇಜ್ ಸೆಟ್ಟಿಂಗ್ಸ್) ಕ್ಷೇತ್ರಕ್ಕೆ ಅವರು ನೀಡಿರುವ ಗಣನೀಯ ಕೊಡುಗೆಗಳನ್ನು ಪರಿಗಣಿಸಿ ಈ ಸನ್ಮಾನ ನೆರವೇರಿಸಲಾಯಿತು.

ಎಕೆಪಿಎ ಕಾಸರಗೋಡು ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಅವರು ಶಾಲು ಹೊದಿಸಿ ಶುಭ ಕೋರಿದರೆ, ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜ್ ಸ್ಮರಣಿಕೆ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಎಕೆಪಿಎ ಕಾಸರಗೋಡು ಜಿಲ್ಲಾ ಜೊತೆ ಕಾರ್ಯದರ್ಶಿ ಮನು ಎಲ್ಲೋರ, ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ.ಎಂ., ವಲಯ ಜೊತೆ ಕಾರ್ಯದರ್ಶಿ ಗಣೇಶ್ ರೈ ಹಾಗೂ ಯೂನಿಟ್ ಸಮಿತಿ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries