HEALTH TIPS

ಸಾರ್ವಜನಿಕ ಪ್ರತಿಭಟನೆಗಳಲ್ಲಿ ದೇಶವಿರೋಧಿ ಶಕ್ತಿಗಳ ನುಸುಳುವಿಕೆ: ಜನರಿಗೆ RSS ಎಚ್ಚರಿಕೆ

ನವದೆಹಲಿ:  ರಾಷ್ಟ್ರೀಯ ಸಮಸ್ಯೆಗಳು, ರಾಷ್ಟ್ರೀಯತೆ, ಹಿಂದುತ್ವ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಿದ್ಧವಿದೆ. ಆದರೆ, ಸಾರ್ವಜನಿಕ ಪ್ರತಿಭಟನೆಗಳಲ್ಲಿ ದೇಶವಿರೋಧಿ ಶಕ್ತಿಗಳು ನುಸುಳಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಜನರು ಜಾಗೃತರಾಗಿರಬೇಕು ಎಂದು ಸಂಘದ ಹಿರಿಯ ನಾಯಕ ಸುನೀಲ್ ಅಂಬೇಕರ್ ಎಚ್ಚರಿಸಿದ್ದಾರೆ.


ನ. 2ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಆರಂಭವಾಗಲಿರುವ RSSನ ವಾರ್ಷಿಕ ಸಭೆಗೂ ಮುನ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

RSS ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ರಾಷ್ಟ್ರೀಯತೆ, ಹಿಂದುತ್ವ ಹಾಗೂ ಇತರ ವಿಷಯಗಳ ಕುರಿತು ಸಂಘ ಪರಿವಾರದ ದೃಷ್ಟಿಕೋನವನ್ನು ಚರ್ಚಿಸಲು ಸಿದ್ಧರಿದ್ದಾರೆ. ಇಂತಹ ಚರ್ಚೆಗಳು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಲೇ ಬಂದಿವೆ ಎಂದು ಅವರು ಹೇಳಿದರು.

ದಿಲ್ಲಿಯಲ್ಲಿ ನಡೆದ Gen Z ಪ್ರತಿಭಟನೆಯ ಹಿನ್ನೆಲೆಯಲ್ಲಿ ಯುವಜನರನ್ನು ತಲುಪುವಲ್ಲಿ RSS ವಿಳಂಬ ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಂಬೇಕರ್, ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತುವವರನ್ನು ಸಂಘ ಪರಿವಾರ ಬೆಂಬಲಿಸುತ್ತದೆ ಅಥವಾ ವಿರೋಧಿಸುತ್ತದೆ ಎಂದು ಊಹಿಸುವುದು ತಪ್ಪು ಎಂದರು.

'ದೇಶದಲ್ಲಿ ಯಾರಾದರೂ ಯಾವುದಾದರೂ ವಿಷಯದ ಕುರಿತು ಧ್ವನಿ ಎತ್ತಿದರೆ, ಸಂಘ ಪರಿವಾರವು ಅವರ ಪರವಾಗಿದೆ ಅಥವಾ ವಿರುದ್ಧವಾಗಿದೆ ಎಂದು ಏಕೆ ಭಾವಿಸಬೇಕು? ಇದು ತಪ್ಪು ಯೋಚನೆ. ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಯಾರಾದರೂ ಪ್ರಶ್ನೆಗಳನ್ನು ಎತ್ತುವುದು ಒಳ್ಳೆಯದು. ಹಾಗೆ ಮಾಡಲು ಅವರಿಗೆ ಅಧಿಕಾರವಿದೆ' ಎಂದು ಹೇಳಿದರು. ಈ ಕುರಿತು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಪ್ರತಿಭಟನೆಗಳು ದೇಶದ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ಹೊಂದಿರಬೇಕು. ದೇಶವಿರೋಧಿ ಶಕ್ತಿಗಳು ಅವುಗಳಲ್ಲಿ ನುಸುಳಿ ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

'ದೇಶದಲ್ಲಿ ನಡೆಯುವ ಯಾವುದೇ ಪ್ರತಿಭಟನೆಗಳು ದೇಶದ ಹಿತಾಸಕ್ತಿಗಾಗಿ ನಡೆಯಬೇಕು. ದೇಶವನ್ನು ಮುನ್ನಡೆಸುವ ಗುರಿಯನ್ನು ಹೊಂದಿರಬೇಕು. ದೇಶದ ಹಿತಾಸಕ್ತಿಗೆ ವಿರುದ್ಧವಾದ ಶಕ್ತಿಗಳು ಪ್ರತಿಭಟನೆಗಳಲ್ಲಿ ನುಸುಳಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು' ಎಂದು ಅಂಬೇಕರ್ ತಿಳಿಸಿದರು.

ನಾಗ್ಪುರದಲ್ಲಿ ನಡೆದ ವಿಜಯದಶಮಿ ಸಂಭ್ರಮಾಚರಣೆ ಸಂದರ್ಭದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದರು. ದೇಶದಲ್ಲಿ ನಡೆಯುವ ಪ್ರತಿಭಟನೆಗಳು ದೇಶದ ಹಿತಾಸಕ್ತಿಯನ್ನು ಕಾಪಾಡುವಂತಿರಬೇಕು ಹಾಗೂ ದೇಶವಿರೋಧಿ ಶಕ್ತಿಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಭಾಗವತ್ ಹೇಳಿದ್ದನ್ನು ಅಂಬೇಕರ್ ಉಲ್ಲೇಖಿಸಿದರು.

ಈ ವಿಚಾರದಲ್ಲಿ RSS ಜಾಗರೂಕವಾಗಿದ್ದು, ಪ್ರತಿಭಟನೆಗಳ ಮೇಲಿನ ನಿಗಾ ಹಾಗೂ ಮೇಲ್ವಿಚಾರಣೆಯನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries