HEALTH TIPS

ಎಚ್ಚರ! SIR ಹೆಸರಲ್ಲಿ ವಂಚನೆ; ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ಹಣ ಕಾಣೆ

ತಿರುವನಂತಪುರಂ: ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ರದ್ದು ಮಾಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕೇಂದ್ರ ಸರ್ಕಾರ ಹಿಂದೆ ಸರಿಯುತ್ತಿಲ್ಲ. ಇದರಿಂದ ಸೃಷ್ಟಿಯಾಗಿರುವ ವಿವಾದವೇ ಈಗ ಆನ್‌ಲೈನ್‌ ವಂಚಕರಿಗೆ ಅವಕಾಶದ ಬಾಗಿಲು ತೆರೆದಂತಾಗಿದೆ. 


ಎಸ್‌ಐಆರ್‌ ತಿದ್ದುಪಡಿ ಹೆಸರಲ್ಲಿ ಕೇರಳಂ ವ್ಯಕ್ತಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಗಾಗಿ ₹ 7.7 ಲಕ್ಷ ಕಳೆದುಕೊಂಡಿದ್ದಾರೆ.

ಕೊಚ್ಚಿಯ 72 ವರ್ಷದ ವ್ಯಕ್ತಿಗೆ ವಂಚನೆ ಆಗಿರುವ ಸಂಬಂಧ ತ್ರಿಪ್ಪುಣಿತ್ತುರ ಹಿಲ್‌ ಪ್ಯಾಲೆಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತದಾರರ ಪಟ್ಟಿಯಲ್ಲಿರುವ ಸಂತ್ರಸ್ತ ವ್ಯಕ್ತಿಯ ಹೆಸರಿನಲ್ಲಿ ದೋಷವಾಗಿದೆ ಎಂಬಂತೆ ಅವರ ಮೊಬೈಲ್‌ಗೆ ಅಕ್ಟೋಬರ್‌ 30ರಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿ, ಅವರ ಹೆಸರು ಮತ್ತು ತಂದೆಯ ಹೆಸರಿನಲ್ಲಿ ದೋಷವಾಗಿದೆ ಎಂದು ಉಲ್ಲೇಖಿಸಿ, ಚುನಾವಣಾ ಆಯೋಗದ ಅಧಿಕಾರಿಗೆ ಕರೆ ಮಾಡುವಂತೆ ಸೂಚಿಸಿ ನಂಬರ್‌ವೊಂದನ್ನು ನೀಡಲಾಗಿತ್ತು. ಹಾಗೆಯೇ, ಲಿಂಕ್‌ವೊಂದನ್ನು ನೀಡಿ ₹ 10 ಶುಲ್ಕ ಪಾವತಿಸುವಂತೆ ಮತ್ತು ಡೆಬಿಟ್‌ ಕಾರ್ಡ್‌ ವಿವರ ನೀಡುವಂತೆ ತಿಳಿಸಲಾಗಿತ್ತು.

ಇದರ ಬೆನ್ನಲ್ಲೇ, ವ್ಯಕ್ತಿಯ ಬ್ಯಾಂಕ್‌ ಖಾತೆಯಿಂದ ₹ 7.7 ಲಕ್ಷ ಡೆಬಿಟ್‌ ಆಗಿದೆ.

ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರ ಪ್ರಕಾರ, ಮೊದಲು ₹ 3.20 ಲಕ್ಷ, ನಂತರ ₹ 4.5 ಲಕ್ಷ ಕಡಿತಗೊಂಡಿದೆ. ಎರಡು ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗಿದೆ. ವಂಚಕರ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries