HEALTH TIPS

ಕೇರಳದಲ್ಲಿ ರಸ್ತೆ ಅಪಘಾತಗಳ ತಡೆಗೆ 'ಕೇರಳ ರೋಡ್ ಸೇಫ್ಟಿ ಮಿಷನ್' ಆರಂಭ: ರಾಯಭಾರಿಯಾಗಿ ನಟ ಮಮ್ಮುಟ್ಟಿ ನೇಮಕ; ನವೆಂಬರ್ 15ರಂದು ಅಧಿಕೃತ ಘೋಷಣೆ

ಕೊಚ್ಚಿ: ರಾಜ್ಯದಲ್ಲಿ ಸಂಭವಿಸುವ ರಸ್ತೆ ಅಪಘಾತಗಳು ಹಾಗೂ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ‘ಕೇರಳ ರೋಡ್ ಸೇಫ್ಟಿ ಮಿಷನ್’ಗೆ ನವೆಂಬರ್ 15ರಂದು ಚಾಲನೆ ದೊರೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಎರ್ನಾಕುಲಂ ಟೌನ್‌ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಾರಿಗೆ ಸಚಿವ ಸಿ.ಪಿ. ಜಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಖ್ಯಾತ ಚಲನಚಿತ್ರ ನಟ ಮಮ್ಮುಟ್ಟಿ ಅವರು ಈ ಯೋಜನೆಯ ರಾಯಭಾರಿಯಾಗಲಿದ್ದಾರೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. 


ಕೇರಳದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದಾಗಿ ಅಂದಾಜು 3,600ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಪ್ರಮುಖ ಗುರಿಯಾಗಿದೆ. ‘ಎನ್‌ಲೈಟನ್ ಆಂಡ್ ಎನ್‌ಫೋರ್ಸ್’ (ತಿಳಿವಳಿಕೆ ಮತ್ತು ಕಟ್ಟುನಿಟ್ಟಿನ ಜಾರಿ) ತತ್ವದಡಿ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜತೆಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಕೇವಲ ನಗರಗಳಿಗೆ ಸೀಮಿತಗೊಳಿಸದೆ ಜಿಲ್ಲಾ ಮತ್ತು ಸ್ಥಳೀಯ ಮಟ್ಟಗಳಿಗೂ ವಿಸ್ತರಿಸಲಾಗುವುದು. ಇದರ ಭಾಗವಾಗಿ ಸ್ಥಳೀಯ ಮಟ್ಟದಲ್ಲಿ ‘ಸೇಫ್ ಡ್ರೈವಿಂಗ್ ಕ್ಲಬ್‌’ಗಳನ್ನು ರಚಿಸಲು ನಿರ್ಧರಿಸಲಾಗಿದೆ.

ರಸ್ತೆಗಳ ನವೀಕರಣ, ಅಪಘಾತ ವಲಯಗಳ (ಬ್ಲ್ಯಾಕ್ ಸ್ಪಾಟ್‌) ಸಮಸ್ಯೆಗಳ ಪರಿಹಾರ, ನಾಮಫಲಕಗಳ ದುರಸ್ತಿ, ಜೀಬ್ರಾ ಕ್ರಾಸಿಂಗ್‌ಗಳ ಅಗಲ ಹೆಚ್ಚಳ ಹಾಗೂ ರಸ್ತೆ ಗುರುತುಗಳಲ್ಲಿ ಕಲರ್ ಕೋಡಿಂಗ್ ಅಳವಡಿಸಿ ಸುರಕ್ಷತಾ ವಲಯಗಳನ್ನು ನಿರ್ಮಿಸುವ ಕಾಮಗಾರಿಗಳನ್ನೂ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ.

ಇದರೊಂದಿಗೆ ಶಾಲಾ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ವಿಷಯವನ್ನು ಅಳವಡಿಸಲು ಮತ್ತು ಸಾರ್ವಜನಿಕರಲ್ಲಿ ಸುರಕ್ಷತಾ ಜಾಗೃತಿ ಮೂಡಿಸಲು ವಿಶೇಷ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries