HEALTH TIPS

No title

ಬದಿಯಡ್ಕ: ಗಡಿನಾಡು ಕಾಸರಗೋಡಿನಲ್ಲಿ ಇಂದು ಕನ್ನಡ ಭಾಷೆ, ಸಂಸ್ಕೃತಿಗಳ ಮೇಲಾಗುತ್ತಿರುವ ಸಾಂಸ್ಕೃತಿಕ ಧಾಳಿಗಳಿಂದ ರಕ್ಷಿಸಿ, ಇಲ್ಲಿಯ ಕನ್ನಡದ ಅನನ್ಯತೆಯನ್ನು ಕಾಪಾಡುವಲ್ಲಿ ಯಕ್ಷಗಾನದ ಕೊಡುಗೆ ಮಹತ್ವದ್ದಾಗಿದೆ. ಹಲವು ವರ್ಷಗಳಿಂದ ಶ್ರೀಕ್ಷೇತ್ರ ಕೊಲ್ಲಂಗಾನ ಯಕ್ಷಗಾನಕ್ಕೆ ನೀಡುತ್ತಿರುವ ಅನನ್ಯ ಸೇವೆಯು ಸ್ತುತ್ಯರ್ಹ ಎಂದು ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು. ನವರಾತ್ರಿ ಉತ್ಸವದ ಅಂಗವಾಗಿ ಕೊಲ್ಲಂಗಾನ ಶ್ರೀನಿಲಯ ದುಗರ್ಾಪರಮೇಶ್ವರಿ ಸನ್ನಿಧಿಯಲ್ಲಿ ಕೊಲ್ಲಂಗಾನ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘ ಹಮ್ಮಿಕೊಂಡಿರುವ ಯಕ್ಷದಶ ವೈಭವ ಕಾರ್ಯಕ್ರಮವನ್ನು ಗುರುವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು. ಕಲೆ ಮತ್ತು ಕಲಾವಿದರನ್ನು ಪೋಶಿಸುವ ವಾತಾವರಣ ಬೆಳೆದಷ್ಟು ಸಾಮಾಜಿಕ, ಸಾಂಸ್ಕೃತಿಕ ಶಕ್ತಿ ವೃದ್ದಿಯಾಗುತ್ತದೆ. ಕಾಸರಗೋಡಿನಲ್ಲಿ ಇಂದು ಕನ್ನಡ ಭಾಷೆಯ ಮೇಲಾಗುತ್ತಿರುವ ಪ್ರಹಾರಗಳನ್ನು ತಾಳಿಕೊಳ್ಳುವಲ್ಲಿ ಯಕ್ಷಗಾನ ಕಲೆಯ ಕೊಡುಗೆಗಳನ್ನು ಅಥರ್ೈಸುವ ಅಗತ್ಯವಿದ್ದು, ಯುವ ಸಮೂಹ ಇದರ ಉನ್ನತಿಗೆ ಕಟಿಬದ್ದರಾಗಬೇಕೆಂದು ಅವರು ತಿಳಿಸಿದರು. ಶ್ರೀಕ್ಷೇತ್ರ ಕೊಲ್ಲಂಗಾನ ತಾಳಮದ್ದಳೆ ಕೂಟದಿಂದ ಬಯಲಾಟದ ವರೆಗೆ ತಳಮಟ್ಟದಲ್ಲಿ ಕಲಾವಿದರನ್ನು ಸೃಷ್ಟಿಸುವಲ್ಲಿ ವಹಿಸುತ್ತಿರುವ ಪಾತ್ರದ ಬಗ್ಗೆ ಅವರು ಶ್ಲಾಘಿಸಿದರು. ಈ ಸಂದರ್ಭ ನೂತನವಾಗಿ ನಿಮರ್ಿಸಲಾದ ತಂತ್ರವಿದ್ಯಾತಿಲಕ ದಿ.ಅನಂತಪದ್ಮನಾಭ ಉಪಾಧ್ಯಾಯ ನೂತನ ಸಭಾ ಮಂಟಪವನ್ನು ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಮಾತನಾಡಿ, ಕಲೆ, ಸಂಸ್ಕೃತಿಗಳ ಬೆಳವಣಿಗೆಗಳಿಗೆ ಹಮ್ಮಿಕೊಳ್ಳಲಾಗುವ ಬಹುಮುಖ ಯೋಜನೆಗಳು ಪರಂಪರೆಯನ್ನು ಬೆಳೆಸುವಲ್ಲಿ ನಮ್ಮ ಅಂತರ್ಯದ ಭಾವಗಳನ್ನು ತಿಳಿಯಪಡಿಸುತ್ತದೆ. ಯಕ್ಷಗಾನ ಸಹಿತ ವಿವಿಧ ಕಲಾಪ್ರಕಾರಗಳು ಅಭಿವೃದ್ದಿಹೊಂದಿದಷ್ಟು ಧಮರ್ಾಚರಣೆ, ಜೀವನ ಮೌಲ್ಯಗಳು ಜೀವಂತವಾಗಿರುತ್ತದೆ ಎಂದು ತಿಳಿಸಿದರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಆಶೀರ್ವಚನಗೈದು, ಸಮಗ್ರ ಬದುಕಿನ ಯಶಸ್ಸಿಗೆ ವೇದ,ಪುರಾಣ ಅರಿವು ಅಗತ್ಯವಿದ್ದು, ಜನಸಾಮಾನ್ಯರನ್ನು ಇದು ಮುಟ್ಟುವಲ್ಲಿ ಯಕ್ಷಗಾನದ ಹಿರಿಮೆಯನ್ನು ಬಣ್ಣಿಸಿದರು. ಕ್ಯಾಂಪ್ಕೋದ ಮಾಜಿ ನಿದರ್ೇಶಕ ಕೃಷ್ಣ ಭಟ್ ಕುರುವೇರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಉದ್ಯಮಿ ರಾಂ ಪ್ರಸಾದ್ ಕಾಸರಗೋಡು, ಹರೀಶ ಗೋಸಾಡ, ಮಂಜುನಾಥ ಡಿ.ಮಾನ್ಯ, ಕುಮಾರಸುಬ್ರಹ್ಮಣ್ಯ ಶುಭಾಶಂಸನೆಗೈದರು. ಮೂಲಡ್ಕ ನಾರಾಯಣ ಮಣಿಯಾಣಿ ಸ್ವಾಗತಿಸಿ, ಶ್ರೀದೀಕ್ಷಾ ವಂದಿಸಿದರು. ಸತೀಶ ಪುಣಿಚಿತ್ತಾಯ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಬಳಗ ಮುಳಿಯಾರು ತಂಡದವರಿಂದ ಪ್ರಮೀಳಾಜರ್ುನ-ಬಬ್ರುವಾಹನ ಬಯಲಾಟ ಪ್ರದರ್ಶನಗೊಂಡಿತು.ಸೆ.23 ರಂದು ಪಟ್ಟಾಜೆ ಗೋಪಾಲ ಭಟ್ ಬಳಗದವರಿಂದ ಜಾಂಬವತೀ ಕಲ್ಯಾಣ ಪ್ರಸಂಗದ ಬಯಲಾಟ ಪ್ರದರ್ಶನಗೊಳ್ಳಲಿದೆ. ಶ್ರೀನಿಲಯದಲ್ಲಿ ನವರಾತ್ರಿಯ ಅಂಗವಾಗಿ ಗುರುವಾರ ಬೆಳಿಗ್ಗೆ ಶ್ರೀದೇವರ ಪ್ರತಿಷ್ಠೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. (ಪೋಟೋ =ಸುಬ್ರಾಯ ಹೊಳ್ಳ ಕಾಸರಗೋಡು ಉದ್ಘಾಟಿಸಿ ಯಕ್ಷದಶ ವೈಭವಕ್ಕೆ ಚಾಲನೆ ನೀಡುತ್ತಿರುವುದು.)

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries