HEALTH TIPS

No title

ಬಜಕೂಡ್ಲು ಗೋಶಾಲೆಯಲ್ಲಿ ಗೋವರ್ಧನ ಗಿರಿಯಲ್ಲಿ ಗೋಪಾಷ್ಟಮೀ ಮಹೋತ್ಸವ 1008 ದೀಪಗಳಿಂದ ಅಲಂಕೃತಗೊಂಡ ಗೋವರ್ಧನ ಗಿರಿ. ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಸಾಕೇತ' ವೇದಿಕೆಯಲ್ಲಿ ಕಳೆದ 9 ದಿನಗಳಿಂದ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ನಡೆದುಬರುತ್ತಿರುವ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪಯರ್ಾ-ಗೋಪಾಷ್ಟಮೀ ಮಹೋತ್ಸವದ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಗೋಪಾಷ್ಟಮೀ ಮಹೋತ್ಸವವು ಶನಿವಾರ ರಾತ್ರಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ದೇವೇಂದ್ರನನ್ನು ಪೂಜಿಸಿಕೊಂಡು ಬರುತ್ತಿದ್ದ ಗೋಪಾಲಕರು ಶ್ರೀಕೃಷ್ಣನ ನಿದರ್ೇಶನದಂತೆ ಗೋವರ್ಧನ ಪರ್ವತವನ್ನು ಪೂಜಿಸುವುದನ್ನು ಕಂಡು ಕ್ರೋಧಗೊಂಡ ದೇವೇಂದ್ರನು ಗೋಕುಲದ ಮೇಲೆ ಸತತ 7 ದಿನಗಳ ಕಾಲ ಮಳೆ ಸುರಿಸಿದ. ಗೋಪಾಲಕರು ಶ್ರೀಕೃಷ್ಣನ ಮೊರೆಹೋದಾಗ ಆತ ಗೋವರ್ಧನ ಪರ್ವತವನ್ನೇ ಕಿರುಬೆರಳಿನಿಂದ ಎತ್ತಿ ಹಿಡಿದು ಇಂದ್ರನ ಗರ್ವಭಂಗ ಮಾಡಿ ಗೋಪಾಲಕರನ್ನು ಹಾಗೂ ಗೋವುಗಳನ್ನು ರಕ್ಷಿಸಿದ ದಿನವನ್ನು ಗೋಪಾಷ್ಟಮಿಯಾಗಿ ಆಚರಿಸುತ್ತಾರೆ. ಭಾರತೀಯ ಗೋತಳಿಯ ಗೋಮಯದಿಂದ ವಿಶೇಷವಾಗಿ ನಿಮರ್ಿಸಲ್ಪಟ್ಟ ಗೋವರ್ಧನ ಗಿರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಯಿತು. ಮುಸ್ಸಂಜೆಯ ಹೊತ್ತಿನಲ್ಲಿ 1008 ಹಣತೆಗಳಿಂದ ಶೃಂಗರಿಸಿದ ಗೋವರ್ಧನ ಗಿರಿಯ ದೃಶ್ಯ ಸೇರಿದ ಆಸ್ತಿಕರನ್ನು ಭಕ್ತಿಪರವಶರನ್ನಾಗಿಸಿತು. ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗೋಪಾಷ್ಟಮಿ ಕಾರ್ಯಕ್ರಮವು ವೇದಮೂತರ್ಿ ಕೇಶವ ಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಶ್ರದ್ದಾಭಕ್ತಿಯಿಂದ ನಡೆದು ಬರುತ್ತಿದೆ. ಗಮನ ಸೆಳೆದ ಹಣತೆಗಳ ಗೋವರ್ಧನ: ಸಮಾರಂಭವು ರಾತ್ರಿಯ ಬೆಳದಿಂಗಳಲ್ಲಿ ಹಣತೆಗಳ ಪ್ರಭಾಪ್ರಪಂಚದೊಂದಿಗೆ ಆಪ್ಯಾಯಮಾನವಾಗಿ ತೆರೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ವಿವಿಧ ಮಾದರಿಗಳಲ್ಲಿ ಹಚ್ಚಿಟ್ಟ 1008 ಹಣತೆಗಳು ಹೊಸ ಪ್ರಪಂಚವನ್ನು ಸೃಷ್ಟಿಸಿ ಪುಳಕಗೊಳಿಸಿತು. ಜೊತೆಗೆ ಕಪರ್ೂರದ ಘಮಲು ಭಾವಪ್ರಪಂಚ ಸೃಷ್ಟಿಸಿತು. ಹೇಳಿಕೆ: ದೀಪಾವಳಿಯ ಗೋಪಾಷ್ಟಮಿ ಪರ್ವ ಕಾಲದಲ್ಲಿ ಗೋವಿನ ಸಾನ್ನಿಧ್ಯದಲ್ಲಿ ರಾಮಾಯಣ ಪಾರಾಯಣ ಕಾರ್ಯಕ್ರಮದ ಮೂಲಕ ಶ್ರೀರಾಮಚಂದ್ರನನ್ನು ವಿವಿಧ ಧಾಮರ್ಿಕ ಕಾರ್ಯಕ್ರಮಗಳ ಮೂಲಕ ಆರಾಧಿಸಿರುವುದು ನಾಡಿನ ಸಮಸ್ಥರ ಶ್ರೇಯೋಭಿವೃದ್ಧಿಗೆ ಸಂಪ್ರಾಥರ್ಿಸಲಾಗಿದೆ. ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. - ಪ್ರೊ.ಶ್ರೀಕೃಷ್ಣ ಭಟ್, ಮುಳ್ಳೇರಿಯ ಮಂಡಲ ಅಧ್ಯಕ್ಷರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries