HEALTH TIPS

No title

ಸಾಯಿ ಕೇಂದ್ರ ವಸತಿ ನಿಮರ್ಾಣ ಯೋಜನೆ ಇಂದು ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ ಮುಳ್ಳೇರಿಯ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸಾಯಿ ಪ್ರಸಾದಂನ ಭವನ (ವಸತಿ) ನಿಮರ್ಾಣ ಯೋಜನೆಗೆ ನವೆಂಬರ್ 1ರಂದು ಚಾಲನೆ ನೀಡಲು ನಿರ್ಧರಿಸಲಾಗಿದೆ. ಕೇರಳ ಸರಕಾರ, ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಇವುಗಳ ನೇತೃತ್ವದಲ್ಲಿ ಎರಡನೇ ಹಂತವಾಗಿ ಈ ಯೋಜನೆಯು ಜಾರಿಗೆ ಬರಲಿದೆ. ಇದರಲ್ಲಿ 36 ಮನೆಗಳನ್ನು ಜೋಯಿ ಆಲುಕ್ಕಾಸ್ ಫೌಂಡೇಶನ್ ನಿಮರ್ಿಸಿ ಕೊಡಲಿದೆ. ಈ 36 ಮನೆಗಳನ್ನು ಜೋಯಿ ಆಲುಕ್ಕಾಸ್ ಹೆಸರಲ್ಲೇ ನಿಮರ್ಿಸಲು ತೀಮರ್ಾನಿಸಲಾಗಿದೆ. ಇದಕ್ಕೆ ಎರಡು ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. 2018ರ ವಿಷು ದಿನದಂದು ಈ ಮನೆಗಳ ನಿಮರ್ಾಣ ಕೆಲಸ ಪೂತರ್ಿಗೊಳಿಸಿ ಅವುಗಳನ್ನು ಅರ್ಹ ಎಂಡೋಸಲ್ಫಾನ್ ಬಾಧಿತರಿಗೆ ಹಸ್ತಾಂತರಿಸಲಾಗುವುದು ಎಂದು ಆರ್ಫನೇಜ್ ಟ್ರಸ್ಟ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ.ಎನ್.ಆನಂದ ಕುಮಾರ್ ತಿಳಿಸಿದ್ದಾರೆ. ಈ ಯೋಜನೆಯಂತೆ ಮೊದಲ ಹಂತದಲ್ಲಿ ಪುಲ್ಲೂರು ಪೆರಿಯಾ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಮನೆಗಳನ್ನು ನಿಮರ್ಿಸಲಾಗಿತ್ತು. ಅವುಗಳನ್ನು ಅರ್ಹರಿಗೆ 2017ರ ಜನವರಿ 19ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಸ್ತಾಂತರಿಸಿದ್ದರು. ಈ ಮಧ್ಯೆ ದ್ವಿತೀಯ ಹಂತದ ಯೋಜನೆಯನ್ನು ಇಲ್ಲೇ ಆರಂಭಿಸಲು ನಿಧರ್ಾರ ಕೈಗೊಳ್ಳಲಾಗಿದೆ. ನ.1ರಂದು ನಡೆಯುವ ಸಮಾರಂಭದಲ್ಲಿ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಶಿಲಾನ್ಯಾಸ ನೆರವೇರಿಸುವರು. ಮನೆಗಳ ಪಕ್ಕದಲ್ಲಿ ಆಂಫಿ ಥಿಯೇಟರ್, ಆಯುಷ್ಯ ಕೇಂದ್ರ, ಮಕ್ಕಳ ಪಾಠಶಾಲೆ ಮತ್ತು ಮಕ್ಕಳ ಉದ್ಯಾನವನವನ್ನು ನಿಮರ್ಿಸಲು ನಿಶ್ಚಯಿಸಲಾಗಿದೆ. ಒಟ್ಟು ಐದು ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಟೌನ್ಶಿಪ್ ನಿಮರ್ಿಸಲು ಯೋಜನೆ ರೂಪಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries