ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಗುಪ್ತ ಕಂಪನಿಗಳ ಆಸ್ತಿ ಪತ್ತೆ ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ಹೊಸದಿಲ್ಲಿ: ಈಗಾಗಲೇ ಸ್ತಂಭನಗೊಳಿಸಲಾಗಿರುವ 2.1 ಲಕ್ಷ ಕಂಪನಿಗಳ ಆಸ್ತಿಗಳನ್ನು ಪತ್ತೆ ಮಾಡುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಆಗ್ರಹಿಸಿದೆ. ಕಾನೂನು, ನ್ಯಾಯ ಮತ್ತು ಕಾಪರ್ೊರೇಟ್ ವ್ಯವಹಾರಗಳ ರಾಜ್ಯ ಸಚಿವ ಪಿ.ಪಿ. ಚೌಧರಿ, ಅಂತಹ ಕಂಪನಿಗಳ ಆಸ್ತಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಹಾಗೂ ಮಾಹಿತಿಗಳನ್ನು ಕಾಪರ್ೊರೇಟ್ ಸಚಿವಾಲಯದ ಜತೆಗೆ ಹಂಚಿಕೊಳ್ಳುವಂತೆ ರಾಜ್ಯ ಸರಕಾರಗಳ ಪ್ರತಿನಿಧಿಗಳಿಗೆ ಸೂಚಿಸಿದರು.
ನೋಂದಣಿ ರದ್ದುಪಡಿಸಿರುವ ಕಂಪನಿಗಳ ವ್ಯವಹಾರಗಳದ ಬಗ್ಗೆ ನಡೆಯುತ್ತಿರುವ ತನಿಖೆಗಳ ಮಾಹಿತಿ ಪಡೆಯಲು ಕರೆದ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದರು.
ದೇಶಾದ್ಯಂತ ಭೂ ದಾಖಲೆಗಳ ಗಣಕೀಕರಣವಾಗುತ್ತಿರುವುದರಿಂದ ಅಂತಹ ಸೊತ್ತುಗಳನ್ನು ಪತ್ತೆ ಮಾಡುವುದು ಕಷ್ಟವೇನಲ್ಲ. ಜಿಲ್ಲಾಡಳಿತಗಳಿಂದ ರಾಜ್ಯ ಸರಕಾರಗಳು ಮಾಹಿತಿ ಪಡೆದು ಕೇಂದ್ರಕ್ಕೆ ರವಾನಿಸಲು ಹೆಚ್ಚಿನ ಸಮಯವೇನೂ ಬೇಕಾಗಿಲ್ಲ ಎಂದು ಚೌಧರಿ ತಿಳಿಸಿದರು.
ಕಂಪನಿಯ ಹೆಸರನ್ನೇ ನೋಂದಣಿಯಿಂದ ತೆಗೆದುಹಾಕಿದ ಬಳಿಕ ಅವುಗಳ ಸೊತ್ತುಗಳ ಶಾಸನಬದ್ಧ ಮಾಲೀಕತ್ವ ಅಸ್ತಿತ್ವದಲ್ಲೇ ಇರುವುದಿಲ್ಲ ಎಂದು ಸಚಿವರು ರಾಜ್ಯಗಳಿಗೆ ತಿಳಿಸಿದರು.
ಅಂತಹ ಸೊತ್ತುಗಳ ವ್ಯವಹಾರವನ್ನು ತಡೆಯಲು ಜಿಲ್ಲಾಡಳಿತಗಳು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಬೇಕು ಮತ್ತು ಅಂತಹ ಮಾಹಿತಿಗಳನ್ನು ಕಾಪರ್ೊರೇಟ್ ಸಚಿವಾಲಯದ ಜತೆ ಹಂಚಿಕೊಳ್ಳಬೇಕು. ಅಂತಹ ಸೊತ್ತುಗಳ ನೋಂದಣಿಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.




