ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
`ಸುವರ್ಣ ಯಕ್ಷಗಾನಾರ್ಚನೆ'ಯ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಿರಿಬಾಗಿಲು ರಾಮಕೃಷ್ಣ ಮಯ್ಯ
ಕಾಸರಗೋಡು: ಯಕ್ಷಗಾನ ರಂಗದ ಅಗ್ರ ಪಂಕ್ತಿಯ ಮೇಳವಾದ ಧರ್ಮಸ್ಥಳ ಮೇಳವೊಂದರಲ್ಲೇ 27 ವರ್ಷಗಳಿಂದ ತಿರುಗಾಟವನ್ನು ನಡೆಸುತ್ತಿರುವ, ಹಿರಿಯ ಕಿರಿಯ ಹಾಗೂ ಮಧ್ಯಮ ತಲೆಮಾರಿನ ಖ್ಯಾತ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ತಮ್ಮ ಬದುಕಿನ ಸುವರ್ಣ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಸೇವೆಯನ್ನು ಸಲ್ಲಿಸಿದ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕುತ್ಯಾಳ ದೇವರಿಗೆ `ಸುವರ್ಣ ಯಕ್ಷಗಾನಾರ್ಚನೆ'ಯ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ನಿರಂತರವಾಗಿ ಖ್ಯಾತ ಐವತ್ತು ಮಂದಿ ಯಕ್ಷ ಕವಿಗಳ ಕೃತಿಯ ಐವತ್ತು ಹಾಡುಗಳನ್ನು ವಿವಿಧ ಮಟ್ಟುಗಳಲ್ಲಿ ಹಾಡಿ ಪ್ರೇಕ್ಷಕರಿಗೆ ಹೊಸ ಅನುಭವಗಳ ರಸದೌತಣ ಉಣಬಡಿಸಿದರು.
ಬುಧವಾರ ಬೆಳಗ್ಗೆ ಸಂಪ್ರದಾಯದಂತೆ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯ ಬಳಿಕ ಭಾಗವತಿಕೆ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ. ಅಂತಹ ಮೇರು ಸ್ಥಳದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕೃತಜ್ಞತೆಯನ್ನು ಸಲ್ಲಿಸುವ `ಾಗ್ಯ ಬಂದಿದೆ. `ಸುವರ್ಣ ಯಕ್ಷಗಾನಾರ್ಚನೆ' ಯಶಸ್ವಿಯಾಗಿ ಜರಗಲಿ ಎಂದು ಹಾರೈಸಿದ ಅವರು ಮುಂದಿನ ಎಲ್ಲಾ ಕಾರ್ಯಕ್ರಮಗಳು ಅವರಿಗೆ ಕೀತರ್ಿ ತರಲಿ ಎಂದು ಶು`ನುಡಿಗಳನ್ನಾಡಿದರು.
ಖ್ಯಾತ ಯಕ್ಷಗಾನ ಪ್ರಸಂಗಕರ್ತ ಸಂಶೋಧಕ ಶ್ರೀಧರ ಡಿ.ಎಸ್. ಅವರ ನಿದರ್ೇಶನ ಹಾಗೂ ನಿರೂಪಣೆಯಲ್ಲಿ ಐವತ್ತು ಕವಿ ರಚಿತ ಐವತ್ತು ಪ್ರಸಂಗಗಳಿಂದ ಆಯ್ದ ಐವತ್ತು ಹಾಡುಗಳನ್ನು ಐವತ್ತು ಮಟ್ಟುಗಳಲ್ಲಿ ರಾಮಕೃಷ್ಣ ಮಯ್ಯ ಅವರು ಹಾಡಿ ಗೋಪಾಲಕೃಷ್ಣ್ಣನಿಗೆ ಸಮಪರ್ಿಸಿದರು. ಸುವರ್ಣ ಯಕ್ಷಗಾನಾರ್ಚನೆ ದಾಖಲೀಕರಣ ನಡೆಸಲಾಗಿದ್ದು, ಇದರಿಂದ ಮುಂದಿನ ಪೀಳಿಗೆಗೆ ಮತ್ತು ಅಧ್ಯಯನಾಸಕ್ತರಿಗೆ ಉತ್ತಮ ಆಕರವಾಗಲಿದೆ. ಕಾರ್ಯಕ್ರಮದಲ್ಲಿ ಅಧ್ಯಯನಾಸಕ್ತ ನೂರಾರು ಯಕ್ಷಗಾನ ವಿದ್ವಾಂಸರೂ ಭಾಗವತರ ಹಿತೈಷಿಗಳೂ ಭಾಗವಹಿಸಿದ್ದರು.
ಸುವರ್ಣ ಯಕ್ಷಗಾನಾರ್ಚನೆಗೆ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆಯಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ ರಾವ್, ಗೋಪಾಲಕೃಷ್ಣ ನಾವಡ ಮಧೂರು, ಮುರಾರಿ ಕಡಂಬಳಿತ್ತಾಯ, ಗಣೇಶ ಭಟ್ ನೆಕ್ಕರೆ ಮೂಲೆ, ಮುರಳಿ ಮಾಧವ ಮಧೂರು ಭಾಗವಹಿಸಿದರು.
ಅಪರಾಹ್ನ ತೆಂಕುತಿಟ್ಟಿನ ಹಿರಿಯ ಭಾಗವತರುಗಳಾದ ಬಲಿಪ ನಾರಾಯಣ ಭಾಗವತರು ಹಾಗೂ ಪುತ್ತಿಗೆ ರಘುರಾಮ ಹೊಳ್ಳರ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಭಾಗವತರು ಹಾಗೂ ಹಿಮ್ಮೇಳದವರ ಸಮಾಗಮದೊಂದಿಗೆ `ಯಕ್ಷಗಾನಾರ್ಚನೆ' ಜರಗಿತು. ಯಕ್ಷಗಾನಾರ್ಚನೆಯನ್ನು ಸುಬ್ರಾಯಹೊಳ್ಳ ಕಾಸರಗೋಡು, ಗುರುರಾಜ ಹೊಳ್ಳ ಬಾಯಾರು, ನಾ.ಕಾರಂತ ಪೆರಾಜೆ, ಸತೀಶ ಅಡಪ ಸಂಕಬೈಲು ನಿರೂಪಿಸಿದರು. ಮಯ್ಯರ ಆಪ್ತ ತೆಂಕುತಿಟ್ಟಿನ ಖ್ಯಾತ ಹಿರಿಯ ಭಾಗವತ ಬಲಿಪನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಕುರಿಯ ಗಣಪತಿ ಶಾಸ್ತ್ರಿ, ದಿನೇಶ ಅಮ್ಮಣ್ಣಾಯ, ಲೀಲಾವತಿ ಬೈಪಡಿತ್ತಾಯ, ಬಲಿಪ ಪ್ರಸಾದ ಭಟ್, ಬಲಿಪ ಶಿವಶಂಕರ ಭಟ್, ಪಟ್ಲ ಸತೀಶ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ, ರವಿಚಂದ್ರ ಕನ್ನಡಿಕಟ್ಟೆ, ಹೊಸಮೂಲೆ ಗಣೇಶ ಭಟ್, ಜಿ.ಕೆ.ನಾವಡ ಬಾಯಾರು, ರಮೇಶ ಭಟ್ ಪುತ್ತೂರು, ಸುಬ್ರಾಯ ಸಂಪಾಜೆ, ಮುರಳಿ ಶಾಸ್ತ್ರಿ ತೆಂಕಬೈಲು, ಗೋಪಲಕೃಷ್ಣ ಮಯ್ಯ ಪೆಲತ್ತಡ್ಕ, ಪುರುಷೋತ್ತಮ ಭಟ್ ನಿಡುವಜೆ, ತಲ್ಪನಾಜೆ ವೆಂಕಟರಮಣ ಭಟ್ ಹಾಗೂ ಚೆಂಡೆ ಮದ್ದಳೆಯಲ್ಲಿ ಹರಿನಾರಾಯಣ ಬೈಪಡಿತ್ತಾಯ, ಲಕ್ಮೀಶ ಅಮ್ಮಣ್ಣಾಯ, ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ, ಚಂದ್ರ ಶೇಖರ ಭಟ್ ಕೊಂಕಣಾಜೆ, ಗುರುಪ್ರಸಾದ್ ಬೊಳಿಂಜಡ್ಕ, ಚೈತನ್ಯ ಕೃಷ್ಣ ಪದ್ಯಾಣ, ಪ್ರಶಾಂತ ಶೆಟ್ಟಿ ವಗೆನಾಡು, ವಿನಯ ಆಚಾರ್ಯ ಕಡಬ, ಚೇವಾರು ಶಂಕರ ಕಾಮತ್, ಶಿವಪ್ರಸಾದ್ ಭಟ್ ಪುನರೂರು, ಜಗನ್ನಿವಾಸ ರಾವ್ ಪುತ್ತೂರು, ಉದಯ ಕಂಬಾರು, ಅಕ್ಷಯ ವಿಟ್ಲ, ಭಾಸ್ಕರ ಕೋಳ್ಯೂರು, ಗಣೇಶ ಭಟ್ ಬೆಳಾಲು, ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಪಂಜಿಗದ್ದೆ, ನಾರಾಯಣ ತುಂಗ ಭಾಗವಹಿಸಿದರು. ಕಾರ್ಯಕ್ರಮಕ್ಕೆ ಯಕ್ಷ ಮಿತ್ರರು ಮಧೂರು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕೂಡ್ಲು, ಯಕ್ಷಾಭಿಮಾನಿ ಕೂಡ್ಲು, ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು, ಯಕ್ಷಾಭಿಮಾನಿಗಳು ಹಾಗೂ ಸಿರಿಬಾಗಿಲು ಭಾಗವತರ ಹಿತೈಷಿಗಳು ಸಹಕರಿಸಿದರು.







